ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮಾವಿನ ಹಣ್ಣಿನ ಸಿಪ್ಪೆಯನ್ನು ಸೇವಿಸಿ..!
ಹಣ್ಣುಗಳ ರಾಜ ಎಂದೇ ಸುಪ್ರಸಿದ್ಧವಾದ ಮಾವಿನಹಣ್ಣು ಅಂದ್ರೆ ಎಲ್ಲರಿಗೂ ಬಹಳ ಇಷ್ಟ. ಮಾವಿನ ಸೀಸನ್ ಬಂದ್ರೆ ಸಾಕು ಎಲ್ಲಿ ಮಾವಿನ ಹಣ್ಣು ಸಿಗುತ್ತದೆ ಎಂದು ಕಾದು ಕುಳಿತಿರುತ್ತಾರೆ. ಮಾವಿನ ಹಣ್ಣನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಈ ಮಾವಿನಹಣ್ಣುಗಳನ್ನು ಕೆಲವೊಂದು ಔಷಧ ಗುಣಗಳು ಅಡಗಿವೆ… ಇದು ಕೇವಲ ಹಣ್ಣಿನಲ್ಲಿ ಮಾತ್ರವಲ್ಲ ಸಿಪ್ಪೆಯೂ ಕೂಡ ಔಷಧಿ ಗುಣವನ್ನು ಹೊಂದಿದೆ….

ಕೆಲವರು ಮಾವಿನ ಹಣ್ಣನ್ನು ತಿಂದ ನಂತರ ಸಿಪ್ಪೆಯನ್ನು ಬಿಸಾಡುತ್ತಾರೆ.. ಆದರೆ ಹಾಗೆ ಮಾಡುವುದು ತಪ್ಪು ಏಕೆಂದರೆ ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಸಹ ಔಷಧಿಗುಣಗಳು ಇವೆ. ಮಾವಿನ ಹಣ್ಣು ಎಷ್ಟು ರುಚಿಕರವಾಗಿರುತ್ತದೋ ಅಷ್ಟೇ ರುಚಿಯನ್ನು ಮಾವಿನ ಹಣ್ಣಿನ ಸಿಪ್ಪೆ ಕೂಡ ಹೊಂದಿರುತ್ತದೆ.. ಸಿಪ್ಪೆಯಲ್ಲಿ ಕ್ಯಾನ್ಸರ್ ನಿವಾರಕ ಗುಣಗಳಿವೆ ಮತ್ತು ಇದು ಸ್ತನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲದೇ ಇದು ಕರುಳಿನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್ ಇವುಗಳಿಂದ ಜನರನ್ನು ರಕ್ಷಿಸುತ್ತದೆ.

ಈ ಹಣ್ಣಿನ ಸಿಪ್ಪೆ ಯಲ್ಲಿ ಸಸ್ಯಗಳಲ್ಲಿ ಕಂಡುಬರುವ ಕೆಲವೊಂದು ಪ್ರೋಟೀನ್ಗಳು ಸಹ ಇದರಲ್ಲಿ ಇರುತ್ತದೆ. ಮಾವಿನ ಸಿಪ್ಪೆ ಸೇವನೆಯಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದ್ದರಿಂದ ಜನರು ಯಾವುದೇ ಕಾರಣಕ್ಕೂ ಮಾವಿನ ಸಿಪ್ಪೆಯನ್ನು ಬಿಸಾಡದೆ ಅದನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು.





