ನಿಮಗಿದು ತಿಳಿದಿದೆಯೇ..? ಹುಣಸೆ ಹಣ್ಣಿನಲ್ಲಿ ಇದೇ ಆರೋಗ್ಯಕ್ಕೆ ಬೇಕಾದ ಪೌಷ್ಟಿಕಾಂಶಗಳು…!
ಹುಣಸೆ ಹಣ್ಣಿನ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಅದರಲ್ಲೂ ಮಕ್ಕಳಿಗೆ ಉಪ್ಪು ಕಾರ ಹಾಕಿ ಹುಣಸೆಹಣ್ಣು ತಿನ್ನೋದು ಅಂದ್ರೆ ಪಂಚಪ್ರಾಣ. ಮಕ್ಕಳು ಹೆಚ್ಚೆಚ್ಚು ಇದನ್ನ ಸೇವಿಸ್ತಿದ್ರೆ ಹಿರಯರು ಮಕ್ಕಳಿಗೆ ಬೈಯುತ್ತಾರೆ. ಆದರೆ ಇದರಲ್ಲಿರುವ ಆರೋಗ್ಯದ ಗುಣದ ಬಗ್ಗೆ ಯಾರಿಗೂ ತಿಳಿದಿಲ್ಲ. ಇದನ್ನು ಕೇವಲ ಅಡುಗೆಮನೆ ಪದಾರ್ಥಕ್ಕೆ ಹಾಗೂ ಬಾಯಿ ರುಚಿಗೆ ಮಾತ್ರ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದ್ದರಿಂದ ಇದರಲ್ಲಿರುವ ಆರೋಗ್ಯದ ಗುಣವನ್ನು ತಿಳಿದುಕೊಂಡು ನೀವು ಅದನ್ನು ಸೇವಿಸಿದರೆ ನಿಮ್ಮ ಆರೋಗ್ಯವು ಉತ್ತಮ ಮಟ್ಟದಲ್ಲಿರುತ್ತದೆ.

ಹುಣಸೆ ಹಣ್ಣಿನಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್ ಗುಣಗಳು ಇರುತ್ತವೆ. ಇದರಿಂದ ನಮ್ಮ ದೇಹದಲ್ಲಿರುವ ಕೆಟ್ಟ ಕೊಬ್ಬುಗಳು ಕಡಿಮೆಯಾಗುತ್ತದೆ. ಕೆಲವರಿಗೆ ಹೃದಯಕ್ಕೆ ಸಂಬAಧಿಸಿದ ಕಾಯಿಲೆಗಳಿದ್ದರೆ ಅವು ಕೂಡ ಇದರಿಂದ ನಿವಾರಣೆಯಾಗುತ್ತದೆ. ಹುಣಸೆ ಹಣ್ಣಿನಲ್ಲಿ ಕೊಬ್ಬಿನಂಶ ಮತ್ತು ಪೊಟ್ಯಾಶಿಯಂ ಅಂಶ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ರಕ್ತದೊತಡ ನಿಯಂತ್ರಣದಲ್ಲಿರುತ್ತದೆ.

ಒಂದು ಚಿಕ್ಕ ಲೋಟದಲ್ಲಿ ಹುಳಿಯನ್ನು ತೆಗೆದುಕೊಂಡು ನೀರಿನಲ್ಲಿ ಮಿಕ್ಸ್ ಮಾಡಿ ಕುಡಿದರೆ ಮಧುಮೇಹವನ್ನು ನಿಯಂತ್ರಿಸಬಹುದು. ಈ ಹಣ್ಣಿನಲ್ಲಿ ಪೊಟ್ಯಾಶಿಯಂ ನಮ್ಮ ದೇಹದಲ್ಲಿರುವ ಅನೇಕ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಈ ಹುಣಸೆಹಣ್ಣಿನ ಬಗ್ಗೆ ತಿಳಿದುಕೊಂಡು ಅದನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.





