ಪವಾಡಸದೃಶವಾಗಿ ವಿಮಾನ ಅಪಘಾತದಲ್ಲಿ ಪಾರಾದ ರಮೇಶ್ ಬಿಚ್ಚಿಟ್ಟ ಮಾಹಿತಿ…!

ಅಹಮದಾಬಾದ್:‌ ಗುಜರಾತ್‌ ನ ಅಹಮದಾಬಾದ್‌ನಲ್ಲಿ ವಿಮಾನ ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಉಂಟಾದ ಸ್ಫೋಟದಲ್ಲಿ 242 ಮಂದಿ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡಸದೃಶವಾಗಿ ಪಾರಾಗಿದ್ದಾರೆ. ಪೊಲೀಸ್‌ ಆಯುಕ್ತರ ಪ್ರಕಾರ, ರಮೇಶ್‌ ಮತ್ತು ಇನ್ನೊಬ್ಬ ಪ್ರಯಾಣಿಕ ಬದುಕುಳಿದಿದ್ದಾರೆ. ಇನ್ನೊಬ್ಬ ಪ್ರಯಾಣಿಕ ಆಸ್ಪತ್ರೆಯಲ್ಲಿದ್ದಾರೆ ಎನ್ನಲಾಗಿದೆ.

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ವಿಮಾನ ಅಪಘಾತದಲ್ಲಿ ಯಾರೂ ಕೂಡ ಬದುಕುಳಿಯುವ ಸಾಧ್ಯತೆ ಇರಲಿಲ್ಲ, ಆದರೆ, ಸೀಟ್‌ ನಂಬರ್‌ 11A ನಲ್ಲಿ ಕುಳಿತಿದ್ದ 40 ವರ್ಷ ಪ್ರಾಯದ ರಮೇಶ್‌ ಎನ್ನುವವರು ಎಮರ್ಜೆನ್ಸಿ ವಿಂಡೋದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅಪಘಾತದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ವಿಮಾನ ಟೇಕ್‌ ಆಫ್‌ ಆದ 30 ಸೆಕೆಂಡುಗಳ ನಂತರ ದೊಡ್ಡ ಸ್ಫೋಟ ಸಂಭವಿಸಿತು. ವಿಮಾನ ಗಾಳಿಯಲ್ಲಿ ಒದ್ದಾಡಿತು ಮತ್ತು ನಂತರ ನೆಲಕ್ಕೆ ಅಪ್ಪಳಿಸಿತು. ನಾನು ಕಣ್ಣು ತೆರೆದಾಗ ಸುತ್ತಲೂ ಶವಗಳು ಮತ್ತು ಅವಶೇಷಗಳಿದ್ದವು. ನಾನು ಭಯಭೀತನಾಗಿದ್ದೆ ಆದರೆ ಹೇಗೋ ಸೀಟಿನಿಂದ ಎದ್ದು ಉರಿಯುತ್ತಿರುವ ಅವಶೇಷಗಳಿಂದ ಹೊರಗೆ ಓಡಿಹೋದೆ. ಈ ವೇಳೆ ಮುಖ ಮತ್ತು ಕಾಲುಗಳಿಗೆ ಗಾಯಗಳಾಗಿದ್ದವು. ನಾನು ಹೇಗೆ ಬದುಕುಳಿದೆ ಎನ್ನುವುದು ನನಗೆ ತಿಳಿದಿಲ್ಲ. ಬಹುಶಃ ಅದು ದೇವರ ಇಚ್ಛೆಯಾಗಿರಬಹುದು. ನನ್ನ ಸಹೋದರ ನನ್ನೊಂದಿಗೆ ವಿಮಾನದಲ್ಲಿದ್ದರು. ಆತನನ್ನು ಹುಡುಕಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು, ರಮೇಶ್‌ ಅವಶೇಷಗಳಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನರು ಇದನ್ನು ಮುಖದ್ದರ್‌ ಕಾ ಸಿಕಂದರ್‌ ಎಂದಿದ್ದಾರೆ. ಒಟ್ಟಾರೆಯಾಗಿ ನಿನ್ನೆ ನಡೆದ ವಿಮಾನ ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

Leave a Reply

Your email address will not be published. Required fields are marked *

error: Content is protected !!