ಪಪ್ಪಾಯ ಹಣ್ಣನ್ನುತಿನ್ನುವ ಮೊದಲು ತಿಳಿಯಿರಿ ಈ ಎಲ್ಲಾ ಅಂಶಗಳನ್ನು..!

ಪಪ್ಪಾಯ ಹಣ್ಣಿನ ಬಗ್ಗೆ ಯಾರಿಗೆತಾನೆ ತಿಳಿದಿಲ್ಲ ಹೇಳಿ. ಈಗಾಗಲೇ ಸಾಕಷ್ಟು ಬಾರಿ ಪಪ್ಪಾಯ ಹಣ್ಣಿನಕುರಿತು ನಾವು ನಿಮಗೆ ಸಾಕಷ್ಟು ಬಾರಿ ತಿಳಿಸಿದ್ದೇವೆ. ಆದರೂಕೂಡ ಎಷ್ಟೆ ಹೇಳಿದರೂ ಮುಗಿಯದಷ್ಟೂಆರೋಗ್ಯ ಪ್ರಯೋಜನಗಳು ಈ ಪಪ್ಪಾಯ ಹಣ್ಣಿನಲ್ಲಿದೆ. ಯಾವುದೇ ಹಣ್ಣನ್ನಾಗಲೀತಿನ್ನುವ ಮೊದಲುಅದರಉಪಯೋಗ, ಅದನ್ನಯಾವಾಗ ಸೇವಿಸಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಅಂತೆಯೇಪಪ್ಪಾಯ ಹಣ್ಣಿನ ಸೇವನೆಯ ಮೊದಲುಕೂಡ ಈ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು.

ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿತಿನ್ನುವುದು ಸೂಕ್ತ. ಇನ್ನು ಕೆಲವನ್ನುಊಟದ ನಂತರವೇ ಸೇವನೆ ಮಾಡಬೇಕು.
ಪಪ್ಪಾಯ ಹಣ್ಣಿನಲ್ಲಿಕಂಡುಬರುವಪಪಾಯಿನ್‌ಕಿಣ್ವವು ಪ್ರೋಟೀನ್‌ಗಳ ವಿಭಜನೆಗೆ ಬಹಳ ಮುಖ್ಯವಾಗಿದೆ. ಪಪ್ಪಾಯ ಹಣ್ಣನ್ನುಊಟಕ್ಕೆಒಂದುಗಂಟೆ ಮೊದಲುಅಥವಾಊಟವಾಗಿಒಂದುಗಂಟೆಯ ನಂತರ ಸೇವಿಸಬಹುದಾಗಿದೆ.ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿತಿನ್ನುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಪಪ್ಪಾಯ ಸೇವನೆಯಿಂದ ಹೊಟ್ಟೆಯಲ್ಲಿ ಹೆಚ್ಚು ಗ್ಯಾಸ್‌ಉತ್ಪತ್ತಿಯಾಗುವುದಿಲ್ಲ. ಇದುಅಜೀರ್ಣಕ್ಕೆಕೂಡ ಮದ್ದಿನಂತೆ ಕೆಲಸ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಪಪ್ಪಾಯ ಸೇವನೆಯಿಂದರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಲಬದ್ಧತೆಯನ್ನು ನಿವಾರಿಸಲುಇದು ಪ್ರಯೋಜನಕಾರಿ. ಮುಟ್ಟಿನ ಸಮಯದಲ್ಲಿ ಪಪ್ಪಾಯ ಹಣ್ಣನ್ನುತಿಂದರೆ ನೋವು ಕಡಿಮೆಯಾಗುತ್ತದೆ. ಪಪ್ಪಾಯ ಹಣ್ಣನ್ನುತಿನ್ನುವುದರಿಂದ ಹೊಟ್ಟೆ ಶುದ್ಧವಾಗುತ್ತದೆ.
ಆದರೆ, ಕೆಲವರು ಪಪ್ಪಾಯ ಹಣ್ಣು ಸೇವನೆ ಮಾಡಬಾರದು. ಬಹಳ ಮುಖ್ಯವಾಗಿಗರ್ಭಿಣಿ ಹೆಂಗಸರಂತೂ ಪಪ್ಪಾಯ ಹಣ್ಣಿನ ಸೇವನೆ ಮಾಡಲೇ ಬಾರದು. ಇದರ ಸೇವನೆಯಿಂದಗರ್ಭಪಾತವಾಗುವ ಸಂಭವವಿರುತ್ತದೆ. ಹೀಗಾಗಿ ಪಪ್ಪಾಯ ಹಣ್ಣಿನಲ್ಲಿ ಎಷ್ಟು ಉಪಯೋಗಇದೆಯೋ, ಕೆಲವೊಮ್ಮೆ ತಿಳಿಯದೇ ಮಾಡುವತಪ್ಪು ಅಷ್ಟೇ ಅಪಾಯಕಾರಿಕೂಡ ಹೌದು.

Leave a Reply

Your email address will not be published. Required fields are marked *

error: Content is protected !!