ನಿಮಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವ ಹವ್ಯಾಸವಿದೆಯೇ ಹಾಗಾದರೆ ಇದನ್ನೊಮ್ಮೆ ಓದಿ..!

ಇಂದಿನ ದಿನಗಳಲ್ಲಿ ನಾವು ಹೆಚ್ಚಾಗಿ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವುದಿಲ್ಲ. ಏಕೆಂದರೆ ಕೆಲಸದ ಒತ್ತಡ. ನಾವು ಆರೋಗ್ಯಕ್ಕಿಂತ ಹೆಚ್ಚಾಗಿ ಕೆಲಸದ ಮೇಲೆಯೇ ಕಾಳಜಿ ವಹಿಸುತ್ತೇವೆ ಆದರೆ ಇದು ತಪ್ಪು. ಕೆಲವರು ಕೆಲಸದ ಸಮಯದಲ್ಲಿ ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಹೆಚ್ಚಾಗಿ ಕುಡಿಯುವ ರೂಢಿ ಇಟ್ಟುಕೊಂಡಿರುತ್ತಾರೆ. ಆದರೆ ಇದರಿಂದ ಮಾರಕವಾದ ಕಾಯಿಲೆಗಳು ಸಹ ನಿಮಗೆ ಬರುತ್ತವೆ. ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಕುಡಿಯುವುದು ನಮ್ಮ ದೇಹಕ್ಕೆ ಉತ್ತಮವಲ್ಲ. ಇದು ಅನೇಕವಾದ ಮಾರಕ ಕಾಯಿಲೆಗಳನ್ನು ತಂದೊಡ್ಡುತ್ತವೆ.

ಕೆಲವರು ಈ ಪ್ಲಾಸ್ಟಿಕ್ ಬಾಟೆಲ್ ನೀರು ರುಚಿಕರವಾಗಿರುತ್ತದೆ ಎಂದು ಕುಡಿಯುತ್ತಾರೆ ಆದರೆ ಇದು ತಪ್ಪು, ವಾಸ್ತವವಾಗಿ ಇದರಲ್ಲಿ ಅನೇಕ ಬ್ಯಾಕ್ಟೀರಿಯಾಗಳು ಇರುತ್ತವೆ. ಇದು ನಮ್ಮ ದೇಹವನ್ನು ಹಾಳು ಹಾಳುಮಾಡುತ್ತವೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಬರುತ್ತವೆ. ಈ ಪ್ಲಾಸ್ಟಿಕ್ ಬಳಸುವುದರಿಂದ ಪರಿಸರ ಮಾಲಿನ್ಯವು ಹೆಚ್ಚಾಗುತ್ತವೆ. ನಮ್ಮ ಮನೆ ಸುತ್ತಮುತ್ತಲಿನ ವಾತಾವರಣ ಹಾಳಾಗುತ್ತವೆ. ಏಕೆಂದರೆ ಪ್ಲಾಸ್ಟಿಕ್ ಬಾಟಲ್ ಗಳನ್ನು ನಾವು ಹೊರಗೆ ಬಿಸಾಕಿದಾಗ ಇದು ಮಣ್ಣಿನಲ್ಲಿ ಕರಗುವುದಿಲ್ಲ ಬದಲಾಗಿ ಮಣ್ಣನ್ನು ಹಾಳುಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಈ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು. ಇದರಿಂದ ನಮ್ಮ ಆರೋಗ್ಯವು ಉತ್ತಮವಾಗುತ್ತದೆ ಇಲ್ಲದಿದ್ದರೆ ಪ್ಲಾಸ್ಟಿಕ್ ಬಳಸಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ.

Leave a Reply

Your email address will not be published. Required fields are marked *

error: Content is protected !!