ಹಿರಿಯಡಕ: ಅಕ್ರಮವಾಗಿ ಅನ್ನ ಭಾಗ್ಯದ ಅಕ್ಕಿ ಮಾರಾಟ- ಆರೋಪಿಯ ಬಂಧನ
ಹಿರಿಯಡಕ: ಬೊಮ್ಮರಬೆಟ್ಟು ಗ್ರಾಮದ ಮಾಂಬೆಟ್ಟು ಎಂಬಲ್ಲಿ ಪ್ರಭು ಜನರಲ್ ಸ್ಟೋರ್‌ನಲ್ಲಿ ಸರಕಾರದ ಉಚಿತ ಅನ್ನ ಬಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿರುವ ಬಗ್ಗೆ ಸಿಕ್ಕಿದ್ದ ಮಾಹಿತಿಯಂತೆ ಆಹಾರ ನಿರೀಕ್ಷಕರು ಮತ್ತು ಹಿರಿಯಡಕ ಪೊಲೀಸರು ದಾಳಿ ನಡೆಸಿ 1.27ಲಕ್ಷ ರೂ.ಅಕ್ಕಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಭು ಜನರಲ್ ಸ್ಟೋರ್ ಸಿಟೌಟ್‌ನಲ್ಲಿ ಮಾಲಕ ವಾಸುದೇವ ಪ್ರಭು(56) ಕುಕ್ಕದಕಟ್ಟೆ ಎಂಬವರು 131 ಪ್ಲಾಸ್ಟೀಕ್ ಚೀಲಗಳಲ್ಲಿ 1,27,880ರೂ. ಮೌಲ್ಯದ ಒಟ್ಟು 55 ಕ್ವಿಂಟಾಲ್ 60 KG ಅಕ್ಕಿ ದಾಸ್ತಾನು ಮಾಡಿಟ್ಟಿರುವುದು ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸಲಾಗಿರುವ ಅಕ್ಕಿ ಎಂದು ಮಾಹಿತಿ ತಿಳಿದು ದಾಳಿ ನಡೆಸಲಾಗಿದೆ.
ಅಕ್ಕಿಯನ್ನು ಆಹಾರ ನಿರೀಕ್ಷಕರ ಸಮಕ್ಷಮ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಪ್ರಕರಣ ದಾಖಲಿಸಿಕೊಂಡು ಆರೋಪಿ ವಾಸುದೇವ ಪ್ರಭುವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





