ಉಡುಪಿ ಆದರ್ಶ ಆಸ್ಪತ್ರೆ: “ಲಿವರ್ ಹೆಲ್ತ್ ಸ್ಕ್ರೀನಿಂಗ್” ಶಿಬಿರ

ಉಡುಪಿ ಜೂ.10(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಆದರ್ಶ ಆಸ್ಪತ್ರೆ ವತಿಯಿಂದ ಜಾಗತಿಕ ಫ್ಯಾಟಿ ಲಿವರ್ ದಿನದ ಪ್ರಯುಕ್ತ ಜೂ.13 ರಂದು ಬೆಳಿಗ್ಗೆ 9.00ಗೆ ಲಿವರ್ ಹೆಲ್ತ್ ಸ್ಕ್ರೀನಿಂಗ್ ಶಿಬಿರವನ್ನು ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಡಾ. ಸತೀಶ್ ಎಸ್ ನಾಯಕ್ ಅವರು ಫ್ಯಾಟಿ ಲಿವರ್ ಕುರಿತು ಜಾಗೃತಿ ಮಾಹಿತಿ ನೀಡಲಿದ್ದಾರೆ. ಈ ಶಿಬಿರದಲ್ಲಿ ನೋಂದಣಿ ಮತ್ತು ಸಮಾಲೋಚನೆ ಹಾಗೂ ತಪಾಸಣೆ ಮತ್ತು ಡಯಟ್ ಸಮಾಲೋಚನೆಗಳು ಉಚಿತವಾಗಿರುತ್ತದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 0820-2702100-109 ಅಥವಾ 9663330846 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!