ಹಾಲಿಗೆ ಬೆಲ್ಲ ಹಾಕಿ ಕುಡಿಯೋದ್ರಿಂದ ಇದೆ ಈ ಲಾಭ
ಇಂದಿನ ಕಾಲದಲ್ಲಿ ಮಗು ಹೊಟ್ಟೆಯಲ್ಲಿರುವಾಗಲೇ ಅದಕ್ಕೆ ಸರಿಯಾದ ಪೋಷಣೆ ಸಿಕ್ಕರೆ ಮಾತ್ರ ಅದು ಜನಿಸಿದ ಬಳಿಕ ಆರೋಗ್ಯವಂತ ಮಗು ಆಗಿರುತ್ತದೆ. ಮಗು ಗರ್ಭದಲ್ಲಿರುವಾಗ ತಾಯಿ ತಿನ್ನುವ ಆಹಾರದ ಮೇಲೆ ಮಕ್ಕಳ ಬೆಳವಣಿಗೆ ನಿಂತಿರುತ್ತದೆ. ಬಿಡುವಿಲ್ಲದ ಜೀವನದಲ್ಲಿ ಪೋಷಕರು ಮಕ್ಕಳ ಬಗ್ಗೆ ಗಮನಹರಿಸುವುದು ಕೂಡ ಕಡಿಮೆಯಾಗಿರುತ್ತದೆ. ಮಕ್ಕಳ ಹೈಟ್ ಹೆಚ್ಚಾದಾಗ ಅವರು ಬೆಳೆವಣಿಗೆ ಹೊಂದುತ್ತಿದ್ದಾರೆ ಎಂದು ತಿಳಿಯುತ್ತಾರೆ. ಹೆಣ್ಣುಮಕ್ಕಳು ಹೈಟ್ 18 ವರ್ಷದವರೆಗೆ ಹಾಗೂ ಗಂಡುಮಕ್ಕಳು ಹೈಟ್ 21 ವರ್ಷದವರೆಗೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಕ್ಕಳ ಹೈಟ್ ಹೆಚ್ಚಾಗುತ್ತಿಲ್ಲವಾದರೆ ಈ ಮನೆಮದ್ದನ್ನು ಉಪಯೋಗಿಸುವುದು ಉತ್ತಮ. ಇದರಿಂದ ಯಾವುದೇ ಅಡ್ಡಪರಿಣಾಮ ಕೂಡ ಸಂಭವಿಸುವುದಿಲ್ಲ.
250 ಎಂಎಲ್ ಹಾಲಿಗೆ ಬೆಲ್ಲ ಮಿಕ್ಸ್ ಮಾಡಿ ಪ್ರತಿ ದಿನ ಒಂದು ಬಾರಿ ಕುಡಿಯಬೇಕು. ಹೀಗೆ ಮಾಡುವುದರಿಂದ ಮಕ್ಕಳ ಬೆಳವಣಿಗೆ ಉತ್ತಮವಾಗಿ ಆಗುತ್ತದೆ. ಹಾಗೇ ಪ್ರತಿದಿನ 2 ಚಮಚ ಕುಂಬಳಕಾಯಿ ಬೀಜ ಮಕ್ಕಳಿಗೆ ತಿನ್ನಿಸಿ. ಬೇಯಿಸಿದ ಕುಂಬಳಕಾಯಿಗೆ 1 ಚಮಚ ಸಕ್ಕರೆ ಹಾಗೂ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಿಸಿದರೆ ಮಕ್ಕಳ ಹೈಟ್ ಹೆಚ್ಚಾಗುತ್ತದೆ.





