ಉಡುಪಿ: ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆ- ಫಲಿತಾಂಶ ಪ್ರಕಟ
ಉಡುಪಿ ಫೆ.9(ಉಡುಪಿ ಟೈಮ್ಸ್ ವರದಿ): ಮಮ್ಮಿ ಡಿಜಿಟಲ್ ಸ್ಟುಡಿಯೋ ಉದ್ಯಾವರ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ನೇತೃತ್ವದಲ್ಲಿ ಪುತ್ತಿಗೆ ಮಠದ ಪರ್ಯಾಯೋತ್ಸವದ ಅಂಗವಾಗಿ ಆಯೋಜಿಸಿದ್ದ ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆ-2024 ರ ಫಲಿತಾಂಶ ಹೊರಬಿದ್ದಿದೆ.
ಈ ಸ್ಪರ್ಧೆಯಲ್ಲಿ ಪರ್ಕಳದ ನಿಧೇಶ್ ಕುಮಾರ್ ಅವರು ತಮ್ಮ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ದ್ವಿತೀಯ ಬಹುಮಾನವನ್ನು ಪ್ರಸನ್ನ ಪೆರ್ಡೂರು, ತೃತೀಯ ಬಹುಮಾನವನ್ನು ಪ್ರಜ್ವಲ್ ಕಟಪಾಡಿ ಅವರು ಪಡೆದುಕೊಂಡಿದ್ದಾರೆ.
ಇವರ ಜೊತೆಗೆ ಪ್ರದೀಪ್ ಉಪ್ಪೂರು, ಉಮೇಶ್ ಪೈ ಹಾಗೂ ಸುರಭಿ ರತನ್ ಅವರು ತಮ್ಮ ಛಾಯಾಚಿತ್ರಕ್ಕೆ ಸಮಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಈ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಛಾಯಾಗ್ರಾಹಕರಾದ ಅನಂತ ಕೃಷ್ಣ ಭಾಗವತ್, ಉಮೇಶ್ ಮಾರ್ಪಳ್ಳಿ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಈ ಎನ್.ಆರ್.ಐ ಉದ್ಯಮಿ ಹಾಗೂ ಸಮಾಜ ಸೇವಕ ಶೇಖ್ ವಹಿದ್, ಲಯನ್ಸ್ ಸನ್ ಶೈನ್ ಉದ್ಯಾವರ ಇದರ ಅಧ್ಯಕ್ಷ ಪ್ರೇಮ್ ಮಿನೇಜಸ್, ಕಾರ್ಯದರ್ಶಿ ಹರಿ ಉದ್ಯಾವರ, ಖಜಾಂಚಿ ರೋಶನ್ ಕ್ರಾಸ್ತ, ಸದಸ್ಯ ಎಡ್ವಿನ್ ಲೂಯಿಸ್ ಉಪಸ್ಥಿತರಿದ್ದರು.