ಶಿರ್ವ: ವ್ಯಕ್ತಿ ನಾಪತ್ತೆ

ಶಿರ್ವಾ ಜು.30(ಉಡುಪಿ ಟೈಮ್ಸ್ ವರದಿ): ಕಾಪುವಿನ ಶಿರ್ವ ಗ್ರಾಮದಲ್ಲಿ ಮನೆಯಿಂದ ಹೋದ ವ್ಯಕ್ತಿಯೊಬ್ಬರು ವಾಪಸ್ಸು ಬಾರದೆ ನಾಪತ್ತೆಯಾಗಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಥಳೀಯ ನಿವಾಸಿ ನಾಗರಾಜ್‌ ರಾವ್‌(72) ನಾಪತ್ತೆಯಾಗಿರುವವರು. ಇವರು  ಜು.29 ರಂದು ಮಧ್ಯಾಹ್ನದ ವೇಳೆ‌ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಇವರನ್ನು ಎಲ್ಲಾ ಕಡೆ ಹುಡುಕಾಡಿದರೂ ಈವರೆಗೆ ಎಲ್ಲೂ ಪತ್ತೆಯಾಗಿರುವುದಿಲ್ಲ‌ ಎಂಬುದಾಗಿ ನಾಪತ್ತೆಯಾಗಿರುವ ನಾಗರಾಜ್ ರಾವ್ ಅವರ ಮಗಳು ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!