ಕುಂದಾಪುರ: ಒಂದೇ ದಿನ 2 ಮನೆಗಳಲ್ಲಿ 3.84 ಲ.ರೂ. ಮೌಲ್ಯದ ನಗ-ನಗದು ಕಳ್ಳತನ

ಕುಂದಾಪುರ ಜು.30(ಉಡುಪಿ ಟೈಮ್ಸ್ ವರದಿ): ತಾಲೂಕಿನ ಕುಂಬಾಶಿ ಗ್ರಾಮದಲ್ಲಿ ಒಂದೇ ದಿನ‌ ಎರಡು ಮನೆಗಳಿಗೆ ನುಗ್ಗಿದ ಕಳ್ಳರು 3.84  ಲ.ರೂ ಮೌಲ್ಯದ ನಗ ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಕುಂದಾಪುರದ ಕುಂಬಾಶಿ ಗ್ರಾಮದ ಕೊರವಾಡಿ ಗ್ರಾಮದ ಲಕ್ಷ್ಮಣ ಪೂಜಾರಿ ಎಂಬವರ ಮನೆಗೆ ನಿನ್ನೆ ಬೆಳಿಗ್ಗೆ ನುಗ್ಗಿದ ಕಳ್ಳರು ಕೋಣೆಯ ಕಪಾಟಿನಲ್ಲಿ ಇಟ್ಟಿದ್ದ ಒಟ್ಟು 2,50,000 ರೂ. ಮೌಲ್ಯದ 6.5 ಪವನ್‌ ಹಾಗೂ1 ಪವನ್ ತೂಕದ  ಚಿನ್ನದ ಕರಿಮಣಿ ಸರಗಳನ್ನು ದೋಚಿದ್ದಾರೆ. ಬಳಿಕ ಮಧ್ಯಾಹ್ನದ ವೇಳೆ ಕೊರವಾಡಿ ಕ್ರಾಸ್‌ನಲ್ಲಿರುವ ರಾಮಚಂದ್ರ ಹೊಳ್ಳ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯೊಳಗಿದ್ದ 50,000 ರೂ. ನಗದು ಹಾಗೂ 84,000 ರೂ.ಮೌಲ್ಯದ ಚಿನ್ನದ ಪೆಂಡೆಂಟ್ ದೋಚಿ ಪರಾರಿಯಾಗಿದ್ದಾರೆ. 

ಈ ಎರಡೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!