ಗಂಗೊಳ್ಳಿ: ಗಾಂಜಾ ಸೇವನೆ- ಮೂವರ ವಿರುದ್ಧ ಪ್ರಕರಣ

ಗಂಗೊಳ್ಳಿ ಜು.29(ಉಡುಪಿ ಟೈಮ್ಸ್ ವರದಿ): ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಸಂಗೊಳ್ಳಿ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಠಾಣಾ ಪೊಲೀಸರು ತ್ರಾಸಿ  ಗ್ರಾಮದ ಪ್ರವಾಸಿ ಮಂದಿರದ ಬಳಿ ಸಯ್ಯದ್ ಫಾರುಕ್ (30) ಹಾಗೂ ತ್ರಾಸಿ ಬೀಚ್‌ ಪಾರ್ಕ್‌ ಬಳಿ ಜಾಫರ್‌ ಸಿದ್ದಿಕ್(32) ಮತ್ತು ಗಂಗೊಳ್ಳಿ ಬಂದರು ಬಳಿ ಮೊಹಮ್ಮದ್ ಫರಾನ್ (28) ಎಂಬ ಮೂವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.

ಈ ಮೂವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಕಾರಣ ಇವರ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!