ಕಾಲೇಜ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ- ವಿದ್ಯಾರ್ಥಿನಿಯರ ಬಂಧನಕ್ಕೆ ವಿಎಚ್‌ಪಿ ಆಗ್ರಹ

ಉಡುಪಿ: ನರ್ಸಿಂಗ್ ಕಾಲೇಜಿನಲ್ಲಿ ಹಿಂದು ಹುಡುಗಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದವರ ವಿರುದ್ಧ ಸುಮೋಟೋ ಕೇಸ್ ದಾಖಲು ಮಾಡಿದ ಉಡುಪಿ ಪೊಲೀಸ್ ಇಲಾಖೆಯ ಕ್ರಮ ಶ್ಲಾಘನೀಯ. ಅದೇ ರೀತಿ ತಕ್ಷಣ ಆ ಮೂರು ಜನರ ಬಂಧನಕ್ಕೆ ವಿಶ್ವ ಹಿಂದು ಪರಿಷದ್ ಆಗ್ರಹಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ಉಡುಪಿಯ ನರ್ಸಿಂಗ್ ಕಾಲೇಜಿನಲ್ಲಿ ಹಿಂದು ಹುಡುಗಿಯರನ್ನು ಗುರಿಯಾಗಿಸಿ ಅವರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದವರ ವಿರುದ್ಧ ಸೂಕ್ತಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷದ್ ಉಡುಪಿ ಜಿಲ್ಲೆ ಮೊದಲೇ ಪೊಲೀಸ್ ಇಲಾಖೆ ಗೆ ಮನವಿ ಸಲ್ಲಿಸಿತ್ತು.

ಈ ಘಟನೆಯ ಹಿಂದೆ ಜಿಹಾದಿ ಮಾನಸಿಕತೆಯ ಹುಡುಗಿಯರು ಸೇರಿಕೊಂಡು ಲವ್ ಜಿಹಾದ್‌ಗೆ ಪೂರಕವಾಗಿ ಕೆಲಸ ಮಾಡುವ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ತಕ್ಷಣ ಈ ಮೂರು ಜನ ಹುಡುಗಿಯರಾದ ಶಬನಾಬ್, ಅಲ್ಫಿಯ, ಆಲಿಮಾ ಎನ್ನುವವರನ್ನು ಬoಧನ ಮಾಡಬೇಕು. ಇದರ ಹಿಂದೆ ಯಾರ ಕೈವಾಡ ಇದೆ ಎಂದು ಬಯಲಿಗೆ ಎಳೆಯಬೇಕೆಂದು ಉಡುಪಿ ಜಿಲ್ಲಾ ವಿಶ್ವ ‌ಹಿಂದೂ ಪರಿಷತ್ತಿನ ಕಾರ್ಯದರ್ಶಿ ದಿನೇಶ್ ಮೆಂಡನ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!