ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ: ಕಾಲೇಜ್ ಹಾಗೂ ವಿದ್ಯಾರ್ಥಿನಿಯರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು 

ಉಡುಪಿ: ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಉಡುಪಿ ಪ್ಯಾರಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೂರು ವಿದ್ಯಾರ್ಥಿನಿಯರು ವೀಡಿಯೋ ಚಿತ್ರೀಕರಣ ನಡೆಸಿದ ಘಟನೆಯ ಕುರಿತು ಕಾಲೇಜ್ ಮತ್ತು ವಿದ್ಯಾರ್ಥಿನಿಯರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.

ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡ ನಂತರ ಇದೀಗ ಪೊಲೀಸರು ಹೆಚ್ಚಿನ ತನಿಖೆಗಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಮಾಡಿ ಡಿಲೀಟ್ ಆದ ಬಗ್ಗೆ ಮೂವರು ವಿದ್ಯಾರ್ಥಿನಿಯರು ಮತ್ತು ಕಾಲೇಜು ಆಡಳಿತ ಮಂಡಳಿಯವರ ವಿರುದ್ಧ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಕೃತ್ಯ, ಮಾಹಿತಿಯನ್ನು ಮತ್ತು ದಸ್ತಾವೇಜನ್ನು ಹಾಜರುಪಡಿಸಲು ತಪ್ಪುವ ಕೃತ್ಯದ ಅಡಿಯಲ್ಲಿ ಮಲ್ಪೆ ಠಾಣಾ ಪಿಎಸ್‌‌ಐ ರವರು ಸ್ವಯಂ ಪ್ರೇರಿತವಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!