ಕೊಲ್ಲೂರು-ಹೆಬ್ರಿ‌ ಬಸ್‌ನ ಕೊರತೆ-ಸಮಸ್ಯೆ ಪರಿಹಾರಕ್ಕೆ ಆಗ್ರಹ

ಕೊಲ್ಲೂರು ಮೇ 29(ಉಡುಪಿ ಟೈಮ್ಸ್ ವರದಿ) ಸಾರ್ವಜನಿಕರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಬೆಳೆಸಲು ಇರುವ ಅತ್ಯಂತ ಸುಲಭ ವ್ಯವಸ್ಥೆ ಎಂದರೆ ಅದು ಸಾರ್ವಜನಿಕ ಸಂಚಾರ ಬಸ್‌ಗಳು. ಆದರೆ ಹಲವು ಕಡೆಗಳಲ್ಲಿ ಈಗಲೂ ಸಂಚಾರ ವ್ಯವಸ್ಥೆ ಸರಿ ಇಲ್ಲದೆ ಜನರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.

ಹೌದು ಕೊಲ್ಲೂರು- ಹೆಬ್ರಿ ಭಾಗದಲ್ಲಿ ವರ್ಷದ ಮೊದಲ ತಿಂಗಳಿನಿಂದ ಮೇ ಮಧ್ಯಭಾಗದಲ್ಲಿ ಸರಕಾರಿ ಬಸ್ಸು ನಿಲ್ಲಿಸಿದ್ದರು. ಕೊಲ್ಲೂರಿನಿಂದ ಹೆಬ್ರಿ ಬೆಳಿಗ್ಗೆ 7.30 ಕ್ಕೆ ಬಿಟ್ಟರೆ ಮಧ್ಯಾಹ್ನ 2.00 ಗಂಟೆ ತನಕ ಬಸ್ಸು ಇರುವುದಿಲ್ಲ. ಕೊಲ್ಲೂರಿನಿಂದ ಹೆಬ್ರಿಗೆ ಒಂದೆರಡು ಬಸ್ ವ್ಯವಸ್ಥೆ ಮಾತ್ರ ಇದ್ದು, ಇಲ್ಲಿನ ಜನರು ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಕೊಲ್ಲೂರು ,ವಂಡ್ಸೆ, ನೇರಳಕಟ್ಟೆ ,ಅಂಪಾರು, ಶಂಕರನಾರಾಯಣ , ಹಾಲಾಡಿ , ಹೆಬ್ರಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುವ ಖಾಸಗಿ ಬಸ್ಸು ಕೆಲವು ದಿನಗಳಿಂದ ಸ್ಥಗಿತವಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಬಸ್ಸಿನ ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗಿದೆ. ಕೊಲ್ಲೂರಿನಿಂದ ಶೃಂಗೇರಿಗೆ ಹೋಗುವ ಭಕ್ತಾದಿಗಳಿಗೆ ಬೆಳಿಗ್ಗೆ ಕೊಲ್ಲೂರಿನಿಂದ 7.30 ಕ್ಕೆ ಬಸ್ಸಿನ ವ್ಯವಸ್ಥೆ ಇರುತ್ತದೆ. ಆದರೆ ಕೆರಾಡಿ, ಚಿತ್ತೂರು, ಇಡೂರು ಗ್ರಾಮದ ಜನರಿಗೆ ಸಬ್ ರಿಜಿಸ್ಟರ ಆಫೀಸುಗಳಿಗೆ ಬರಲು  ಖಾಸಗಿ ಬಸ್ಸುಗಳಲ್ಲಿ ಕುಂದಾಪುರಕ್ಕೆ  ಹೋಗಿ ಶಂಕರನಾರಾಯಣಕ್ಕೆ ಬರಬೇಕು ಹಲವಾರು ವರ್ಷಗಳಿಂದ ಹನುಮಾನ್ ಸಂಸ್ಥೆಯ ಬಸ್ಸು  ಉಡುಪಿ, ಬಾರ್ಕೂರು, ಮಂದಾರ್ತಿ, ಗೋಳಿಯಂಗಡಿ ,ಹಾಲಾಡಿ ,ಅಂಪಾರು ,ವಂಡ್ಸೆ, ಮಾರ್ಗವಾಗಿ ಸಂಚರಿಸುತ್ತಿದ್ದು ಈಗ ಇದ್ದಕ್ಕಿಂದಂತೆ ಸ್ಥಗಿತವಾಗಿದೆ. ಆದ್ದರಿಂದ ಈ ಭಾಗದಲ್ಲಿ ಸರಕಾರಿ ಬಸ್ಸು ಓಡಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂಬುದು ಇಲ್ಲಿನ ಸಾರ್ವಜನಿಕರ ಆಗ್ರಹವಾಗಿದೆ. 

ಇಲ್ಲಿ ಪ್ರತಿ ನಿತ್ಯ ಶಂಕರನಾರಾಯಣದ ಸರಕಾರಿ ಪ್ರಥಮ ದರ್ಜೇ ಕಾಲೇಜು ವಿದ್ಯಾರ್ಥಿಗಳು ಹೋಗುತ್ತಾರೆ. ಈ ಕಾಲೇಜಿಗೆ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಾರೆ. ಆದರೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಕಾಲೇಜುಗಳಿಂದ ಮನೆಗೆ ಹೋಗಲು ಬಸ್ಸಿನ ವ್ಯವ ಜಲಜಸ್ಥೆ ಇರುವುದಿಲ್ಲ. ಇನ್ನು ಕೆಲವು ಸಮಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆ ನಡೆಯುತ್ತದೆ. ಆವಾಗ ಮದ್ಯಾಹ್ನದಿಂದ ಸಂಜೆ ತನಕ ಬಸ್ಸಿಗಾಗಿ ಕಾಯಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳದ್ದು. 

ವಯಸ್ಕರಿಗಾದರೂ ಸಬ್ ರಿಜಿಸ್ಟರ ಆಫೀಸಿಗೆ ಬರಲು ಅನುಕೂಲ ಮಾಡಿಸಿ ಕೊಡಬೇಕು. ಶಾಲೆ ಮತ್ತು ಕಾಲೇಜು ಬಿಡುವ ಸಮಯದಲ್ಲಿ ಆದರೂ ವಿದ್ಯಾರ್ಥಿಗಳಿಗೆ ಮನೆಗೆ ಹೋಗಲೂ ಬಸ್ಸಿನ ವ್ಯವಸ್ಥೆ ಮಾಡಿಸಿ ಕೊಟ್ಟಿದರೆ ಉತ್ತಮ ಆಗುತ್ತಿತ್ತು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ.  ಮಳೆಗಾಲದ ಸಮಯದಲ್ಲಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ಪರಿಸ್ಥಿತಿ ಬರಬಾರದು. ಕೊಡೆ ಹಿಡಿದುಕೊಂಡು ಬ್ಯಾಗ್‌ನಲ್ಲಿರುವ ಪುಸ್ತಕ ಎತ್ತಿಕೊಂಡು ನಡೆದುಕೊಂಡು ಹೋಗುವ ಪರಿಸ್ಥಿತಿ ಬರಬಾರದು. ಪರೀಕ್ಷೆ ಸಮಯದಲ್ಲಿ ಆದರೂ ಬಸ್ಸಿನ ವ್ಯವಸ್ಥೆ ಮಾಡಿಸಿ ಕೊಡಬೇಕು. ಆದ್ದರಿಂದ ಈ ಭಾಗದ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿ ಇಲ್ಲಿನ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆಯಲ್ಲಿ ಇರುವುದಾಗ ಸಾರ್ವಜನಿಕರ ಪರವಾಗಿ ರಕ್ಷಿತ ಕುಮಾರ ವಂಡ್ಸೆ ಅವರು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!