ಮಾರ್ಚ್ 5 ರಂದು ತೆರೆಯ ಮೇಲೆ ಅಪ್ಪಳಿಸಲಿರುವ ಹೀರೊ

ಬೆಂಗಳೂರು: ಲಾಕ್‍ಡೌನ್ ಬಳಿಕ ಚೆತರಿಸಿಕೊಂಡಿರುವ ಸ್ಯಾಂಡಲ್‍ವುಡ್‍ನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳು ತೆರೆ ಮೇಲೆ ಬರಲು ಕಾದು ಕುಳಿತಿವೆ. ಈ ನಡುವೆ ರಿಷಬ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ `ಹೀರೋ’ ಚಿತ್ರದ ರಿಲೀಸಿಂಗ್ ಡೇಟ್ ಅನೌನ್ಸ್ ಆಗಿದೆ. ಈ ಕುರಿತಾಗಿ ಟ್ವೀಟ್ ಮೂಲಕ ಸಿಹಿ ಸುದ್ಧಿಯನ್ನು ಚಿತ್ರ ತಂಡ ನೀಡಿದ್ದು, ಇದೇ ಮಾರ್ಚ್ 5 ಕ್ಕೆ ರಿಷಬ್ ಹೀರೋ ಆಗಿ ಥೇಟರ್ ಅಂಗಳಕ್ಕೆ ಎಂಟ್ರಿಯಾಗಲಿದ್ದಾರೆ.

ಚಿತ್ರವನ್ನು ಭರತ್ ರಾಜ್ ನಿರ್ದೇಶಿಸಿದ್ದು, ನಾಯಕನಾಗುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ ನಟ ರಿಷಬ್ ಶೆಟ್ಟಿ. ಇವರಿಗೆ ನಾಯಕಿಯಾಗಿ ಮಗಳು ಜಾನಕಿ ಸೀರಿಯಲ್ ಖ್ಯಾತಿಯ ಗಾನವಿ ಲಕ್ಷ್ಮಣ್ ಬಣ್ಣಹಚ್ಚಿದ್ದಾರೆ. ಅಂದಹಾಗೆ ಹೀರೋ ಲಾಕ್‍ಡೌನ್ ಸಮಯದಲ್ಲಿ ತಯಾರಾಗಿರುವ ಚಿತ್ರ. ಇಡೀ ಚಿತ್ರರಂಗ ಸ್ತಬ್ದವಾಗಿ ಕುಳಿತಿದ್ದ ಸಮಯದಲ್ಲಿ ರಿಷಬ್ ಶೆಟ್ಟಿ ಮತ್ತು ತಂಡ ಹೀರೋ ಸಿನಿಮಾ ಮಾಡಿ ಮುಗಿಸಿತ್ತು. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಚಿತ್ರದ ಕುರಿತು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

Leave a Reply

Your email address will not be published. Required fields are marked *

error: Content is protected !!