ದೊಡ್ಮನೆ ಪ್ರವೇಶಿಸಲಿರುವವರ ಸಾಂಭವ್ಯ ಪಟ್ಟಿ: ವೀಕ್ಷಕರಲ್ಲಿ ಹೆಚ್ಚಿದ ಕುತೂಹಲ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋಗಳಲ್ಲಿ ಒಂದಾದ ಬಗ್ ಬಾಸ್ ಸೀಸನ್ 8 ಯಾವಾಗ ಆರಂಭವಾಗುತ್ತದೆ ಎನ್ನುವ ಕುತೂಹಲಕ್ಕೆ ತೆರೆ ಬೀಳುತ್ತಿದ್ದಂತೆ
ಈ ಬಾರಿಯ ಬಿಗ್ ಬಾಸ್‌ನಲ್ಲಿ ಯಾರೆಲ್ಲಾ ದೊಡ್ಮನೆ ಪ್ರವೇಶ ಪಡೆದುಕೊಳ್ಳಲಿದ್ದಾರೆ ಎನ್ನುವ ಕ್ಯೂರಾಸಿಟಿ ಹುಟ್ಟಿಕೊಂಡಿತ್ತು. ಇದೀಗ ಪ್ರೇಕ್ಷಕರ ಈ ಕುತೂಹಲವನ್ನು ಬ್ರೇಕ್ ಮಾಡಲಿದೆ ನಮ್ಮ ಈ ವರದಿ .ಹೌದು ಫೆಬ್ರವರಿಯಿಂದ ಆರಂಭಗೊಳ್ಳಲಿರುವ ಬಿಗ್‌ಬಾಸ್ ಸೀಸನ್ 8 ಕ್ಕೆ ದೊಡ್ಮನೆ ಗೃಹ ಪ್ರವೇಶ ಮಾಡಲಿರುವ ಸೆಲೆಬ್ರೆಟಿಗಳ ಸಾಂಭವ್ಯ ಪಟ್ಟಿ ಈ ರೀತಿ ಇದೆ ನೋಡಿ…

ಈ ಬಾರಿ ಬಿಗ್ ಬಾಸ್ ಮನೆಗೆ ಸಿಲ್ಲಿಲಲ್ಲಿ ಖ್ಯಾತಿಯ ಡಾಕ್ಟ್ರೇ -ರವಿಶಂಕರ್ ಗೌಡ, ಸರಿಗಮಪ ಖ್ಯಾತಿಯ ಮುಗ್ಧ ಹಾಡುಗಾರ ಹನುಮಂತು, ಕಾಮಿಡಿ ಕಿಲಾಡಿ ಖಾರ್ಡ್ ಬೆಡಗಿ ನಯನಾ, ಅವಧೂತ ಗೌರಿಗದ್ದೆ ವಿನಯ್ ಗುರೂಜಿ ಕೂಡ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇವರೊಂದಿಗೆ ನಟ ಸುನೀಲ್, ಭರವಸೆಯ ನಟಿ ವಿನಯ ಪ್ರಸಾದ್, ಜನಪ್ರಿಯ ಆರ್ ಜೆ ರಾಜೇಶ್, ತುಂಟಾಟ ಸಿನಿಮಾದ ನಟಿ ರೇಖಾ, ಅಗ್ನಿಸಾಕ್ಷಿ ಧಾರಾವಾಹಿ ನಟಿ ವೈಷ್ಣವಿ ಗೌಡ, ನಿರ್ದೇಶಕ ರವಿ ಶ್ರೀವತ್ಸ ವಾರ್ತಾ ವಾಚಕ ಟಿವಿ 9 ಅಮರ್ ಪ್ರಸಾದ್, ಜೊತೆ ಜೊತೆಯಲ್ಲಿ ಖ್ಯಾತಿಯ ನಟ ಅನಿರುದ್ದ್, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಬಿಗ್ ಬಾಸ್ ಕದ ತಟ್ಟುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆದರೆ ವಾಸ್ತವಾಗಿ ಯಾವೆಲ್ಲ ಸೆಲೆಬ್ರೆಟಿಗಳು ಇರಲಿದ್ದಾರೆ ಎಂಬು ನೋಡಲು ದೊಡ್ಮನೆ ಗೃಹಪ್ರವೇಶದ ವರೆಗೆ ಕಾಯಲೇ ಬೇಕು. ಮತ್ತೊಂದೆಡೆ ಸುದೀಪ್ ಅವರ ನಿರೂಪಣಾ ಶೈಲಿಯನ್ನು ಕಾಣಲು ಬಿಗ್ ಬಾಸ್‌ಗಾಗಿ ಕಾಯುತ್ತಿರುವವರು ಇದ್ದಾರೆ. ಒಟ್ಟಾರೆ ಫೆಬ್ರವರಿ ವೇಳೆಗೆ ಮತ್ತೆ ಬಿಗ್‌ಬಾಸ್ ಮನೆಯಲ್ಲಿ ಖುಷಿ, ಹಾಡು, ಗಲಾಟೆ ಗದ್ದಲಗಳು ಮತ್ತೆ ಆರಂಭವಾಗಲಿದೆ.

Leave a Reply

Your email address will not be published. Required fields are marked *

error: Content is protected !!