“ಸೂರರೈ ಪೊಟ್ರು” ಸಿನಿಮಾ ಆಸ್ಕರ್ ಪ್ರಶಸ್ತಿಗೆ ನೋಮಿನೇಶನ್

ಬೆಂಗಳೂರು: ಭಾರತೀಯ ಚಿತ್ರ ರಂಗದ ಪಾಲಿಗೆ ಆಸ್ಕರ್ ಅವಾರ್ಡ್ ಪಡೆಯುವುದು ಅಂದರೆ ಅದೊಂದು ಮಹಾನ್ ಸಾಧನೆ ಮಾಡಿದಂತೆ. ದಕ್ಷಿಣ ಭಾರತೀಯ ಚಿತ್ರಗಳ ಪಾಲಿಗೆ ಆಸ್ಕರ್ ಎನ್ನುವುದು ಒಂದು ರೀತಿ ಮರೀಚಿಕೆ ಇದ್ದಂತೆ. ಈ ಆಸ್ಕರ್ ಅವಾರ್ಡ್ ಇದುವರೆಗೆ ಭಾರತದ ಬೆರಳೆಣಿಕೆಯ ಮಂದಿಗೆ ಮಾತ್ರ ಒಲಿದಿದೆ. ಇನ್ನು ಆಸ್ಕರ್ ಅವಾರ್ಡ್ ಪಡೆಯುವುದಕ್ಕಿಂದ ಈ ಅವಾರ್ಡ ಗೆ ನೋಮಿನೇಶನ್ ಆಗುವುದೇ ದೊಡ್ಡ ವಿಚಾರ

ಈ ನಿಟ್ಟಿನಲ್ಲಿ ಭಾರತೀಯ ಪಾಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಈ ಪ್ರಕಾರ ಈ ಬಾರಿಯ ಆಸ್ಕರ್ ರೇಸ್‌ನಲ್ಲಿ ಭಾರತೀಯ ಚಿತ್ರರಂಗದ ಅದರಲ್ಲೂ ದಕ್ಷಿಣ ಭಾರತದ ಚಿತ್ರವೊಂದು ಆಸ್ಕರ್ ರೇಸ್‌ನಲ್ಲಿರುವ ಸುದ್ಧಿ ಭಾರೀ ಸದ್ದು ಮಾಡುತ್ತಿದೆ.

 ಕನ್ನಡಿಗ ಏರ್ ಡೆಕ್ಕನ್‌ನ ಸ್ಥಾಪಕ ಜಿ.ಆರ್.ಗೋಪಿನಾಥ್ ಅವರ ಜೀವನಕಥೆಯಾಧಾರಿತ ಚಿತ್ರ ಸೂರರೈ ಪೊಟ್ರು ಸಿನಿಮಾ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ಎಂಟ್ರಿ ಪಡೆದುಕೊಂಡಿದೆ. ತಮಿಳು ನಟ ಸೂರ್ಯ ನಟಿಸಿರುವ ಸೂರರೈ ಪೊಟ್ರು ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾದ ಮೊದಲ ಸ್ಟಾರ್ ನಟನ ತಮಿಳು ಎನಿಸಿಕೊಂಡಿದೆ. ಅಲ್ಲದೆ ಓಟಿಟಿ ಪ್ಲಾಟ್ ಫಾರಂನಲ್ಲಿ ವೀಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಗಿತ್ತು. ಅಬ್ಬರದ ಪ್ರಚಾರವಿಲ್ಲದಿದ್ದರೂ ಅಭಿಮಾನಿಗಳಿಂದಲೇ ದೊಡ್ಡ ಮಟ್ಟದ ಪ್ರಮೋಷನ್ ಪಡೆದುಕೊಂಡಿತ್ತು ಈ ಚಿತ್ರ. ಇದೀಗ ಈ ಚಿತ್ರ  ಜನರಲ್ ಕೆಟಗಿರಿಯಲ್ಲಿ ಆಸ್ಕರ್ ಪ್ರವೇಶಿಸಿದೆ.

ಈ ಚಿತ್ರದಲ್ಲಿ ಕನ್ನಡಿಗ ಗೋಪಿನಾಥ್ ಅವರ ಪಾತ್ರದಲ್ಲಿ ನಟ ಸೂರ್ಯ ನಟಿಸಿದ್ದು, ಪುಟ್ಟ ಗ್ರಾಮದ ಯುವಕ ಹೇಗೆ ಒಂದು ವಿಮಾನಯಾನ ಸಂಸ್ಥೆಯನ್ನು ಕಟ್ಟುತ್ತಾನೆ, ಆತನಿಗೆ ಯಾವೆಲ್ಲ ತೊಂದರೆಗಳು ಎದುರಾಗುತ್ತೆ ಅನ್ನೋ ಕಥಾ ಹಂದರವನ್ನು ಸೂರರೈ ಪೊಟ್ರು ಹೊಂದಿದೆ.

ಸೂರರೈ ಪೊಟ್ರು ವೀಕ್ಷಿಸಿದ ಅಕಾಡೆಮಿ ಸ್ಕ್ರೀನಿಂಗ್ ಸದಸ್ಯರು ಚಿತ್ರಕ್ಕೆ ಮತ ನೀಡಿ ಆಸ್ಕರ್ ಗೆ ನಾಮಿನೇಷನ್ ಮಾಡಿದ್ದಾರೆ. ಉತ್ತಮ ನಟ, ಉತ್ತಮ ನಟಿ, ಉತ್ತಮ ನಿರ್ದೇಶಕ, ಉತ್ತಮ ಸಂಯೋಜನೆ, ಉತ್ತಮ ಚಿತ್ರಕಥೆ, ರಚನೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸಿನಿಮಾ ಸ್ಪರ್ಧೆಯಲ್ಲಿದೆ.

ಈ ಚಿತ್ರ ಸುಧಾ ಕೊಂಗರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಸೂರ್ಯ, ಪರೇಶ್ ರಾವಲ್, ಅಪರ್ಣಾ ಬಲಮುರಳಿ, ಊರ್ವಶಿ, ಮೋಹನ್ ಬಾಬು, ಕರುಣಾಸ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

Leave a Reply

Your email address will not be published. Required fields are marked *

error: Content is protected !!