ರಾಜಮಾರ್ತಾಂಡ ಚಿತ್ರದ ಟ್ರೈಲರ್ ನ್ನು ಬಿಡುಗಡೆ ಗೊಳಿಸಲಿರುವ ಜ್ಯೂನಿಯರ್ ಚಿರು

ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಅವರು ಪ್ರತಿಭಾವತಂತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ತಮ್ಮ ಸಹಜ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದವರು ಚಿರು. ಅವರ ಅಗಲಿಕೆ ನಂತರ ಅವರು ಅಭಿನಯಿಸಿದ್ದ ರಾಜಮಾತಾರ್ಂಡ ಚಿತ್ರ ಟ್ರೈಲರ್ ಬಿಡುಗಡೆಗೆ ಸಜ್ಜಾಗಿದೆ. ಇದೀಗ ದಿ.ಚಿರಂಜೀವಿ ಸರ್ಜಾ ಅವರು ನಟಿಸಿರುವ ರಾಜಮಾರ್ತಾಂಡ ಚಿತ್ರದ ಟ್ರೈಲರ್ ನ್ನು ಅವರ ಮಗ ಜೂ.ಚಿರು ಬಿಡುಗಡೆಗೊಳಿಸಲಿದ್ದಾರೆ ಎನ್ನುವ ಸುದ್ದಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಅಭಿಮಾನಿಗಳಿಗೆ ಚಿರು ಚಿತ್ರದ ಟ್ರೈಲರ್ ರಲೀಸ್ ಗೆ ಸಜ್ಜಾಗುತ್ತಿದೆ ಎನ್ನುವ ಖುಷಿ ಒಂದೆಡೆಯಾದರೆ, ಮತ್ತೊಂದೆಡೆ ಈ ಖುಷಿಯನ್ನು ದುಪ್ಪಟ್ಟುಗೊಳಿಸಿದೆ ಈ ಟ್ರೈಲರ್ ನ್ನು ಅವರ ಮಗ ಜೂ.ಚಿರು ಬಿಡುಗಡೆಗೊಳಿಸಲಿದ್ದಾರೆ ಎನ್ನುವುದು ವಿಚಾರ.

ಇನ್ನು ಈ ಚಿತ್ರಕ್ಕೆ ಚಿರು ಸಹೋದರ ಧ್ರುವ ಸರ್ಜಾ ಕಂಠದಾನ ಮಾಡಿದ್ದಾರೆ. ಈ ಚಿತ್ರವನ್ನು ರಾಮ್ ನಾರಾಯಣ್ ಅವರು ನಿರ್ದೇಶಿಸುತ್ತಿದ್ದು, ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದರೊಂದಿಗೆ ಚಿತ್ರಕ್ಕೆ ಗಣೇಶ್ ಅವರ ಛಾಯಾಗ್ರಹಣವಿದೆ.

ಇದೀಗ ಚಿರು ಚಿತ್ರದ ಟ್ರೈಲರ್ ನ್ನು ಅವರ ಮಗ ಜೂ.ಚಿರು ಬಿಡುಗಡೆಗೊಳಿಸುತ್ತಿರುವ ವಿಷಯವನ್ನು ಚಿತ್ರ ತಂಡ ಹಂಚಿಕೊಂಡಿದ್ದು, ಚಿರು ಅಭಿಮಾನಿಗಳಲ್ಲಿ ಟ್ರೈಲರ್ ಕುರಿತು ಕುತೂಹಲ ಹೆಚ್ಚಿಸಿದೆ.

Leave a Reply

Your email address will not be published. Required fields are marked *

error: Content is protected !!