ಜೆಸಿಐ ಕುಂದಾಪುರದ ಪದಗ್ರಹಣ ಸಮಾರಂಭ :ನೂತನ ಅಧ್ಯಕ್ಷರಾಗಿ ಜೆಸಿ ವಿಜಯ ನರಸಿಂಹ ಐತಾಳ್ ಅಧಿಕಾರ ಸ್ವೀಕಾರ

ಕುಂದಾಪುರ(ಉಡುಪಿ ಟೈಮ್ಸ್ ವರದಿ): “ಮಾನವನ ವ್ಯಕ್ತಿತ್ವ ವಿಕಸನದ ದೃಷ್ಟಿ ಕೋನದಿಂದ ಜೆಸಿಐ ಸಂಸ್ಥೆ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯ, ಈ ರೀತಿಯ ಸಮಾಜ ಸೇವಾ ಸಂಘಟನೆಗಳಿಗೆ ಯುವ ಜನತೆ ಸೇರುವುದರೊಂದಿಗೆ , ತಮ್ಮೊಳಗೆ ಬದಲಾವಣೆಗಳನ್ನು ಕಾಣಬಹುದು ಹಾಗು ಇತ್ತೀಚಿಗೆ ನಡೆಯುತ್ತಿರುವ ಪರಿಸರದ ಮೇಲೆ ಆಗುವ ನಿರಂತರ ಪ್ರಹಾರಗಳನ್ನು ಯುವಜನತೆ ತಡೆಯುವಲ್ಲಿ ಕಾರ್ಯತತ್ಪರಾಗಬೇಕು. ಎಂದು ಕಲಾವಿದ , ಪರಿಸರ ಪ್ರೇಮಿ ದಿನೇಶ್ ಹೊಳ್ಳ ತಿಳಿಸಿದರು.

ಜ.31 ರಂದು ಕುಂದಾಪುರದ ಜೇಸಿ ಭವನದ ಮಹಮ್ಮದ್ ಅನ್ವರ್ ವೇದಿಕೆಯಲ್ಲಿ ನಡೆದ ಕುಂದಾಪುರ ಜೇಸಿಸ್ ನ 47 ನೇ ವರ್ಷದ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಈ ಭಾರಿ ರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ಸೂರು ಇಲ್ಲದವರಿಗೆ ಸೂರು ನೀಡುವ ಮಹೋನ್ನತ ಯೋಜನೆ ಕಾರ್ಯರೂಪಕ್ಕೆ ಬರಲಿ ಎಂದು ಹಾರೈಸಿದರು.

ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತೀಯ ಜೆಸಿಸ್ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಸಂದೀಪ್ ವಿಜಯನ್ ನೂತಹ ಅಧ್ಯಕ್ಷರಿಗೆ ಶುಭಾಶಯ ಕೋರಿದರು. ನೂತನ ಅಧ್ಯಕ್ಷರಾದ ಜೇಸಿ ವಿಜಯ ನರಸಿಂಹ ಐತಾಳ್ ಇವರಿಗೆ ಜೇಸಿ ಸತೀಶ್ ಮೊಗವೀರ ಇವರು ಪ್ರಮಾಣ ವಚನ ಭೋದಿಸಿ ಅಧಿಕಾರ ಹಸ್ತಾಂತಿಸಿದರು. ಇದೇ ವೇಳೆ ಜೆಸಿರೆಟ್ ಅಧ್ಯಕ್ಷೆ ಜೇಸಿ ರೇಖಾ ಚಂದನ್ ಗೌಡ, ಜೆಜೆಸಿ ಅಧ್ಯಕ್ಷ ಪ್ರಖ್ಯಾತ ಶೆಟ್ಟಿ ಅಧಿಕಾರ ವಹಿಸಿಕೊಂಡರು.

ಜೇಸಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ ಸದಾನಂದ ನಾವಡ , ಜೇಸಿ ವಲಯ ಅಧ್ಯಕ್ಷರಾದ ಸೌಜನ್ಯ ಹೆಗ್ಡೆ ಹಾಗೂ ವಲಯ ಉಪಾಧ್ಯಕ್ಷರಾದ ಜೇಸಿ ಗಿರೀಶ್ ಎಸ್.‌ಪಿ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ವಲಯದ ಪೂರ್ವಾಧ್ಯಕ್ಷರಾದ ಜೆಸಿ ವೈ ಸುಕುಮಾರ್, ಜೆಸಿ ರಾಕೇಶ್ ಕೂಂಜೂರು ರಾಷ್ಟ್ರೀಯ ಪೂರ್ವ ಕಾನೂನು ಸಲಹೆಗಾರರಾದ ಜೇಸಿ ಶ್ರೀಧರ್ ಪಿ ಎಸ್, ಜೇಸಿಐ ಕುಂದಾಪುರದ ಪೂರ್ವ ಅಧ್ಯಕ್ಷರಾದ ಜೇಸಿ ಪುರುಷೋತ್ತಮ್ ಶೇಟ್, ಜೇಸಿ ನವೀನ ಶೇಟ್ , ಜೇಸಿ ಅಕ್ಷತಾ ಗಿರೀಶ್ ಐತಾಳ್, ಜೇಸಿ ಶ್ರೀನಾಥ್ ಗಾಣಿಗ, ಜೇಸಿ ರತ್ನಾಕರ,ವಲಯ ಅಧಿಕಾರಿಯಾದ ಜೆಸಿ ಅಶೋಕ್ ತೆಕಟ್ಟೆ, ಜೇಸಿ ಸುರೇಶ್ ಹಂಗಳೂರು, ಜೇಸಿ ವಿಷ್ಣು ಕೆ.ಬಿ , ಜೇಸಿ ಯು ಆರ್ ಶೆಣೈ , ಜೇಸಿ ದಿನೇಶ್ ಗೋಡೆ, ಜೇಸಿಐ ಕುಂದಾಪುರದ ನೂತನ ಪದಾಧಿಕಾರಿಗಳು ಹಾಗೂ ಎಲ್ಲಾ ಸಕ್ರಿಯ ಸದಸ್ಯರು ಉಪಸ್ಥಿತರಿದ್ದರು. ಜೇಸಿಐ ಕುಂದಾಪುರದ ಕಾರ್ಯದರ್ಶಿ ಜೇಸಿ ಪ್ರವೀಣ್ ಏಮ್ ಬಾಳಿಕೆರೆ ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!