ಗ್ರಾಹಕರ ಖಾತೆಯಿಂದ ದುಬಾರಿ ಸರ್ವೀಸ್ ಚಾರ್ಜ್ ಕಡಿತಗೊಳಿಸಿದ ಕೆನರಾ ಬ್ಯಾಂಕ್!

ಉಡುಪಿ: ಸಿಂಡಿಕೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ಪ್ರತಿಯೊಬ್ಬರ ಉಳಿತಾಯ ಖಾತೆಯಿಂದ ಸರ್ವಿಸ್ ಚಾರ್ಜ್ ಹೆಸರಿನಲ್ಲಿ ತಲಾ ₹142 ಮತ್ತು ₹236 ರುಪಾಯಿಂತೆ ಒಟ್ಟು 378 ರೂಪಾಯಿಯನ್ನು ಬ್ಯಾಂಕ್ ಕಡಿತಗೊಳಿಸಿದೆ. 

ಕಳೆದ ಕೆಲವು ತಿಂಗಳ ಹಿಂದೆ ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕ್ ನೊಂದಿಗೆ ವಿಲೀನಮಾಡಿದ್ದ ಕೇಂದ್ರ ಸರಕಾರ, ಸಿಂಡಿಕೇಟ್ ಬ್ಯಾಂಕ್ ನಿಂದ  ಕೆನರಾ ಬ್ಯಾಂಕ್ ಗೆ ಗ್ರಾಹಕರ ಖಾತೆ ವರ್ಗಾವಣೆ ಪ್ರಕ್ರಿಯೆಗಳು ಇತ್ತಿಚೆಗೆ ಮುಕ್ತಾಯಗೊಂಡಿದ್ದವು. 

ಈಗಾಗಲೇ ಎಸ್ ಎಮ್ ಎಸ್ ಶುಲ್ಕ, ಚೆಕ್ ಬುಕ್ ಶುಲ್ಕ, ಡೆಬಿಟ್ ಕಾರ್ಡ್ ಶುಲ್ಕ ಹೀಗೆ ಹಲವಾರು ಶುಲ್ಕಗಳನ್ನು ಪಾವತಿಸುತ್ತಾ ಬಂದಿರುವ ಗ್ರಾಹಕರಿಗೆ ಬಜೆಟ್ ನಂತರ ವಿಧಿಸಲಾಗಿರುವ ಹೆಚ್ಚುವರಿ ಶುಲ್ಕವು ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ಈಗಾಗಲೇ ದಿನ ನಿತ್ಯದ ರೇಷನ್ ವಸ್ತುಗಳು, ವಿದ್ಯುತ್, ಅಡುಗೆ ಅನಿಲ, ಪೆಟ್ರೋಲ್ ಡಿಸಲ್ ಬೆಲೆಗಳು ಗಗನಕ್ಕೇರಿ ಗ್ರಾಹಕರ ಜೇಬಿಗೆ ಬಿದ್ದಿರುವ ಕತ್ತರಿಯಿಂದ   ಕಂಗೆಟ್ಟಿರುವಾಗಲೇ, ಬ್ಯಾಂಕ್ ನಿಂದ ಆಗುತ್ತಿರುವ ಕಡಿತವು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಈ ಬಗ್ಗೆ ಬ್ಯಾಂಕಿನ ಪ್ರಭಂದಕರಲ್ಲಿ ವಿಚಾರಿಸಿದಾಗ ಈ ಶುಲ್ಕಗಳನ್ನು ಗ್ರಾಹಕರು ಕಟ್ಟಲೇಬೇಕು ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ  ಇದು ಬ್ಯಾಂಕಿನ ಆದೇಶ ಎಂದು ಉತ್ತರಿಸಿರುವುದು ನಿಜಕ್ಕೂ ನೋವಿನ ಸಂಗತಿ.. 

ವಿಧಿಸಲಾಗಿರುವ ಹೆಚ್ಚುವರಿ ಸೇವಾ ಶುಲ್ಕ  ಯಾವ ಸೇವೆಯನ್ನು ನೀಡಿದಕ್ಕಾಗಿ ಎಂಬುದನ್ನು ಸಂಭಂದಪಟ್ಟ  ಅಧಿಕಾರಿಗಳು  ಅಥವಾ ಸರಕಾರವೇ ಉತ್ತರ ನೀಡಬೇಕು ಮತ್ತು ಹೆಚ್ಚುವರಿ ಪಡೆಯಲಾಗಿರುವ ಸೇವಾ ಶುಲ್ಕವನ್ನು ಮರಳಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂಬುದು ನಮ್ಮ ಆಗ್ರಹ. 
ಕೆ ಜನಾರ್ದನ ಭಂಡಾರ್ಕಾರ್

2 thoughts on “ಗ್ರಾಹಕರ ಖಾತೆಯಿಂದ ದುಬಾರಿ ಸರ್ವೀಸ್ ಚಾರ್ಜ್ ಕಡಿತಗೊಳಿಸಿದ ಕೆನರಾ ಬ್ಯಾಂಕ್!

  1. ಸಿಂಡಿಕೇಟ್ ಬ್ಯಾಂಕ್ ನ ಖಾತೆಯನ್ನು ಹಾಗೇ ಉಳಿಸಿ ಖಾತೆ ಮುಕ್ತಾಯಗೊಳಿಸಲು ಅವಕಾಶ ನೀಡಿ

Leave a Reply

Your email address will not be published. Required fields are marked *

error: Content is protected !!