ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ ಕುಮಾರ್ ಬಹರೈನ್ ಗೆ ಸಾರ್ವಜನಿಕ ಸನ್ಮಾನ

ಉಡುಪಿ ಫೆ.17 (ಉಡುಪಿ ಟೈಮ್ಸ್ ವರದಿ): ರಾಜಾಭಿನಂದನಾ ಸಮಿತಿ, ಉಡುಪಿ ಇದರ ವತಿಯಿಂದ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತ ರಾಜ್‍ಕುಮಾರ್ ಬಹರೈನ್, ಅಂಬಲಪಾಡಿ ಇವರಿಗೆ “ಸಾರ್ವಜನಿಕ ಸನ್ಮಾನ” “ರಾಜಾಭಿನಂದನೆ” ಕಾರ್ಯಕ್ರಮ ಫೆ.19 ಮಧ್ಯಾಹ್ನ 3.30ಕ್ಕೆ ಉಡುಪಿ ಪುರಭವನದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂ ಇದರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ನಿ.ಬೀ ವಿಜಯ ಬಳ್ಳಾಲ್ ಅವರು ಶುಭ ಹಾರೈಸಲಿದ್ದಾರೆ.

ಶಾಸಕ ಕೆ. ರಘುಪತಿ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಲಿದ್ದು, ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕ ನಾಡೋಜ ಡಾ.ಜಿ ಶಂಕರ್, ಆಳ್ವಾಸ್ ಸಮೂಹ ವಿದ್ಯಾ ಸಂಸ್ಥೆ ಮೂಡುಬಿದ್ರೆ ಇದರ ಪ್ರವರ್ತಕ ಡಾಕ್ಟರ್ ಮೋಹನ್ ಆಳ್ವ, ಉಜ್ವಲ್ ಡೆವಲಪರ್ಸ್ ಇದರ ಆಡಳಿತ ನಿರ್ದೇಶಕ ಪುರುಷೋತ್ತಮ ಪಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ಅಧ್ಯಕ್ಷ ಕೆ ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಇದರ ಅಧ್ಯಕ್ಷ ಯಶ್ ಪಾಲ್ ಎ ಸುವರ್ಣ, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಲ್ಕಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ ಅಧ್ಯಕ್ಷ ಬಿ ಎನ್ ಶಂಕರ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ ಎ. ಕುಂದರ್, ಉಡುಪಿ ನ್ಯೂ ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ರಮೇಶ್ ನಾಯಕ್ , ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಕೃಷ್ಣಪ್ರಸಾದ್, ರಂಗ ಕಲಾವಿದ ಚಿತ್ರನಟ ದೇವದಾಸ್ ಕಾಪಿಕಾಡ್, ಲೀಲಾಕ್ಷ ಕರ್ಕೇರ, ಯಕ್ಷಗಾನ ಕಲಾರಂಗ ಉಡುಪಿ ಇದರ ಕಾರ್ಯದರ್ಶಿ ಮುರಳಿ ಕಡೆಕಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಇದರ ನಿಕಟಪೂರ್ವ ಅಧ್ಯಕ್ಷ ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್ ಅವರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಎಕ್ಸ್ಟ್ರೀಮ್ ಡ್ಯಾನ್ಸ್ ಅಕಾಡೆಮಿ ಉಡುಪಿ ಇವರ ವತಿಯಿಂದ ನೃತ್ಯ ಕಾರ್ಯಕ್ರಮ, ಕುದ್ರೋಳಿ ಗಣೇಶ್ ಮಂಗಳೂರು ಇವರಿಂದ ಮನೋರಂಜನೆ ಕಾರ್ಯಕ್ರಮಗಳು ಹಾಗೂ ಸಂಜೆ 5:00 ಗೆ ರಾಜಾಭಿನಂದನೆ ಸಭಾ ಕಾರ್ಯಕ್ರಮ ಹಾಗೂ ಸಂಜೆ 6.30 ಕ್ಕೆ ಬಲೆ ತಲಿ ಪಾಲೆ ಖ್ಯಾತಿಯ ಪ್ರಶಂಸಾ ಕಾಪು ತಂಡದವರಿಂದ ತುಳು ಹಾಸ್ಯಮಯ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!