ಉಡುಪಿ: ಲೋಕಾಯುಕ್ತ ಪೊಲೀಸ್ ನಿರೀಕ್ಷಕರ ಮನೆ ಮುಂದೆ ನಿಲ್ಲಿಸಿದ್ದ ಸೈಕಲ್‍ಗಳನ್ನೇ ಎಗರಿಸಿದ ಕಳ್ಳರು

ಉಡುಪಿ ಫೆ.17 (ಉಡುಪಿ ಟೈಮ್ಸ್ ವರದಿ) : ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ಮನೆ ಮುಂದೆ ನಿಲ್ಲಿಸಿದ್ದ ಸೈಕಲನ್ನೆ ಕಳ್ಳರು ಎಗರಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಫೀಕ್. ಎಂ ಅವರ ಮನೆ ಮುಂದೆ ನಿಲ್ಲಿಸಿದ್ದ 2 ಸೈಕಲ್‍ಗಳು ಕಳ್ಳತನ ವಾಗಿದೆ. ಇವರು ಉಡುಪಿ ನಗರ ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಪೊಲೀಸ್ ಅಧಿಕಾರಿಗಳ ವಸತಿಗೃಹದಲ್ಲಿ ತಮ್ಮ ಸಂಸಾರದೊಂದಿಗೆ ವಾಸವಾಗಿದ್ದು, ತಮ್ಮ ಕಾರು, ಸ್ಕೂಟಿ ಹಾಗೂ ಎರಡು ಸೈಕಲ್‍ಗಳನ್ನು ವಸತಿಗೃಹದ ಪಕ್ಕದಲ್ಲಿನ ಶೆಡ್ ನಲ್ಲಿ ನಿಲ್ಲಿಸಿದ್ದರು. ಫೆ.13 ರ ಬೆಳಿಗ್ಗೆ ಯಿಂದ ಫೆ.14 ರ ಸಂಜೆಯ ನಡುವಿನ ಸಮಯದಲ್ಲಿ ಕಳ್ಳರು ಸೈಕಲ್‍ಗಳಿಗೆ ಅಳವಡಿಸಿದ ಬೀಗವನ್ನು ಮುರಿದು 16,100 ರೂ ಮೌಲ್ಯದ 2 ಸೈಕಲ್‍ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ರಫೀಕ್. ಎಂ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!