ಬಂಟರ ಸಂಘ ಕುವೈಟ್: 2023 ನೇ ಸಾಲಿನ ಪಧಾದಿಕಾರಿಗಳ ಆಯ್ಕೆ

ಉಡುಪಿ ಫೆ.1 (ಉಡುಪಿ ಟೈಮ್ಸ್ ವರದಿ) : ಬಂಟರ ಸಂಘ ಕುವೈಟ್ ಇದರ 2023 ನೇ ಸಾಲಿನ 20ನೇ ವರ್ಷದ ನೂತನ ಅಧ್ಯಕ್ಷರು ಮತ್ತು ಪಧಾದಿಕಾರಿಗಳ ಆಯ್ಕೆ, ಪದಪ್ರಧಾನ ಸಮಾರಂಭ ಇತ್ತೀಚೆಗೆ ಕುವೈಟ್ ನ ಇಂಡಿಯನ್ ಸ್ಕೂಲ್ ಆಫ್ ಎಕ್ಸೆಲೆನ್ಸ್ ಸಾಲ್ಮಿಯಾದಲ್ಲಿ ನಡೆಯಿತು.

ಈ ವೇಳೆ ಬಂಟರ ಸಂಘ ಕುವೈಟ್ ಇದರ ನೂತನ ಅಧ್ಯಕ್ಷರಾಗಿ ಸತೀಶ್ಚಂದ್ರ ಶೆಟ್ಟಿ ನಕ್ರೆ , ಉಪಾಧ್ಯಕ್ಷರಾಗಿ ಶೋಧನ್ ಶೆಟ್ಟಿ, ಪ್ರಧಾನಕಾರ್ಯದರ್ಶಿಯಾಗಿ ವಿಶ್ವನಾಥ್ ಶೆಟ್ಟಿ ನಿಟ್ಟೆ , ಕೋಶಾಧಿಕಾರಿಯಾಗಿ ಸಂದೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಶೆಟ್ಟಿ ಕಿನ್ನಿಗೋಳಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ದೀಪ್ತಿ ಪ್ರಶಾಂತ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ದುಷ್ಯಂತ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಗುರುಪ್ರಸಾದ್ ಹೆಗ್ಡೆ ಅವರು ತಂಡದ ಸಂಘಟಿತ ಪರಿಶ್ರಮ ಮತ್ತು ಸರ್ವ ಸದಸ್ಯರ ಬೆಂಬಲವನ್ನು ಸ್ಮರಿಸುವುದರ ಜೊತೆಗೆ ಸಂಘದ ಕಾರ್ಯಚಟುವಟಿಕೆಗಳು ಹಾಗೂ ನೂತನ ಆಡಳಿತ ಮಂಡಳಿಯ ಸರ್ವಸದಸ್ಯರಿಗೂ ಶುಭವನ್ನು ಕೋರಿದರು.

ಇದೇ ವೇಳೆ ನಿರ್ಗಮಿತ ಸಮಿತಿಯ ವತಿಯಿಂದ 2022 ನೇ ಸಾಲಿನ ಆಡಳಿತ ಮಂಡಳಿಯ ಸದಸ್ಯರು, ವಿಧ್ಯಾಭ್ಯಾಸದ ನೆಲೆಯಲ್ಲಿ ವಯುಕ್ತಿಕ ಸಾಧನೆಗೈದವರನ್ನು ಹಾಗೂ ನವವಿವಾಹಿತ ದಂಪತಿಗಳನ್ನು ಗುರುತಿಸಿ ಗೌರವಿಸಲಾಯಿತು.

ಸಂಘದ ಸದಸ್ಯರಾದ ಸ್ವಾತಿ ಶೆಟ್ಟಿ , ರೋಶನಿ ಶೆಟ್ಟಿ , ಸುಷ್ಮಾ ಶೆಟ್ಟಿ , ಸಾನ್ವಿ ಶೆಟ್ಟಿ , ಸ್ತುತಿ ಸುಕೇಶ್ ಶೆಟ್ಟಿ , ಮೃದಿನಿ ಶೆಟ್ಟಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿಶೇಷ ಆಕರ್ಷಣೆಯಾಗಿ “ಬಂಟಾಟಿಕೆ” ಎಂಬ ನ್ರತ್ಯ ರೂಪಕ (ರಚನೆ ಮತ್ತು ನಿರ್ದೇಶನ ಶ್ರೀಮತಿ ಶ್ರುತಿ ರೈ ಪಕ್ಕಳ) ನಡೆಯಿತು. ಮತ್ತು ಮನೋಜ್ ಕುಮಾರ್ ಶೆಟ್ಟಿ ಅವರ ತಂಡದಿಂದ “ಕುಸಲ್ ದ ಅಸಲ್” ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ನಿಯೋಜಿತ ಚುನಾವಣಾ ಅಧಿಕಾರಿ ಸನತ್ ಕುಮಾರ್ ಶೆಟ್ಟಿ, ಸಂಘದ ಕ್ರೀಡಾ ಸಚಿವರಾದ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ರವಿರಾಜ್ ಶೆಟ್ಟಿ ಸೇರಿದಂತೆ ಸಂಘಧ ಮಾಜಿ ಅಧ್ಯಕ್ಷರುಗಳ ಜೊತೆಗೆ 2022 ರ ಸಾಲಿನ ಅಧ್ಯಕ್ಷರು ಮತ್ತು ಪಧಾದಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!