ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಮೊಹಮ್ಮದ್ ಗೌಸ್ ಆಯ್ಕೆ

ಕಾರ್ಕಳ ಫೆ.1 (ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಮೊಹಮ್ಮದ್ ಗೌಸ್ ಮಿಯ್ಯಾರು ಅವರು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಒಕ್ಕೂಟದ ಕಾರ್ಕಳ ತಾಲೂಕು ವಿಭಾಗದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಈ ವೇಳೆ ಉಪಾಧ್ಯಕ್ಷರಾಗಿ ನಾಸೀರ್ ಶೇಖ್ ಬೈಲೂರು, ಕಾರ್ಯದರ್ಶಿಯಾಗಿ ಮಮ್ತಾಜ್ ಹಸನ್, ಜತೆ ಕಾರ್ಯದರ್ಶಿಯಾಗಿ ಶಾಕೀರ್ ಹುಸೇನ್ , ಕೋಶಾಧಿಕಾರಿಯಾಗಿ ಸಯ್ಯದ್ ಹಸನ್ ಗಾಂಧೀಮೈದಾನ್, ತಾಲೂಕು ಉಸ್ತುವಾರಿಯಾಗಿ ಅಶ್ಪಾಕ್ ಅಹ್ಮದ್ ರವರನ್ನು ನೇಮಿಸಲಾಯಿತು.

ಇವರೊಂದಿಗೆ ಜಿಲ್ಲಾ ಸಮಿತಿ ಸದಸ್ಯರಾಗಿ ಮೊಹಮ್ಮದ್ ಶರೀಫ್ ಬಂಗ್ಲೆಗುಡ್ಡೆ, ಅಶ್ಪಾಕ್ ಅಹ್ಮದ್, ಸಮದ್ ಖಾನ್, ನಾಸೀರ್ ಶೇಖ್, ಮೊಹಮ್ಮದ್ ಗೌಸ್ ಅವರು ಹಾಗೂ ಸದಸ್ಯರುಗಳಾಗಿ ಅಬ್ದುಲ್ಲಾ ಆದಂ ಪುಲ್ಕೇರಿ ,ಅಬ್ದುಲ್ ರಶೀದ್, ಸಯ್ಯದ್ ಅಬ್ಬಾಸ್ ಅಂಚಿಕಟ್ಟೆ, ಎನ್ ಸಿ ರಹೀಮ್ ಈದು, ಜಾವೇದ್ ಸಾಹೇಬ್ ಹೊಸ್ಮಾರು, ಎಚ್ ಸುಲೈಮಾನ್ ಬಜಗೋಳಿ, ಎನ್ ಎಚ್ ಹಮೀದ್ ನಿಟ್ಟೆ ಆಯ್ಕೆಯಾಗಿದ್ದಾರೆ.

ಇದೇ ವೇಳೆ ನಾಮನಿರ್ದೇಶಿತ ಸದಸ್ಯರಾಗಿ ಪಿ ಎ ರಹೀಂ ಎಣ್ಣೆಹೊಳೆ, ಅಬ್ದುಲ್ ಮಜೀದ್(ಮುನೀರ್) ತೆಳ್ಳಾರ್, ಮಯ್ಯದ್ದಿ ರೆಂಜಾಳ, ಅಬ್ದುಲ್ ಲತೀಫ್ ಸಾಣೂರು, ಆಸೀಫ್ ಅಜೆಕಾರ್ ರವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!