ಭಾರತ ಮತ್ತು ಚೀನಾ ಗಡಿ ವಿಚಾರ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

ನವದೆಹಲಿ: ಪೂರ್ವ ಲಡಾಖ್ ನ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಾಳೆ (ಜ.24) 9 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಿಲಿಟರಿ ಮಾತುಕತೆ ನಡೆಸಲಿವೆ ಎಂದು ತಿಳಿದು ಬಂದಿದೆ.
     ಈಗಾಗಲೇ ಭಾರತ-ಚೀನಾ ನಡುವೆ ಎಂಟು ಬಾರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಾಗಿದೆ. ನ.6  ರಂದು ಕೊನೇಯದಾಗಿ ಸಭೆಗಳು ನಡೆದಿದ್ದವು.
 ಇದೀಗ ಈ ಭಾರಿಯ ಭಾರತ ಮತ್ತು ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯು, ಭಾರತದ ಚುಶುಲ್ ಸೆಕ್ಟರ್ ಎದುರಿನ ಮೊಲ್ಡೊನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಈ ವರ್ಷದ ಏಪ್ರಿಲ್ – ಮೇ ತಿಂಗಳಿನಿಂದ ಪೂರ್ವ ಲಡಾಖ್ ವಲಯದಲ್ಲಿ ನಡೆಯುತ್ತಿರುವ ಮಿಲಿಟರಿ ನಿಲುವು ಪರಿಹರಿಸುವ ವಿಧಾನಗಳನ್ನು ಎರಡೂ ಕಡೆಯವರು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!