ಭಾರತದ 72 ನೇ ಗಣರಾಜ್ಯೋತ್ಸವ : ವಿದೇಶಿ ನೆಲದಲ್ಲಿ ಅರಳಿದ ತ್ರಿವರ್ಣ ಧ್ವಜ

ಬೀಜಿಂಗ್: ಭಾರತದ 72 ನೇ ಗಣರಾಜ್ಯೋತ್ಸವದ ಪ್ರಯುಕ್ತ ವಿದೇಶದಲ್ಲಿ ತ್ರಿವರ್ಣ ದ್ವಜ ಅರಳಿದೆ.  ಚೀನಾ ಮತ್ತು ಸಿಂಗಾಪುರದ ಅನಿವಾಸಿ ಭಾರತೀಯರು ಇಂದು(ಜ.26) 72 ನೇ ಗಣರಾಜ್ಯೋತ್ಸವವನ್ನು ಸರ್ಕಾರದ ಕೋವಿಡ್ ನಿರ್ಬಂಧಗಳೊಂದಿಗೆ ಆಚರಿಸಿದರು.      ಬೀಜಿಂಗ್‌ನಲ್ಲಿ ರಾಯಭಾರಿ ವಿಕ್ರಮ್ ಮಿಸ್ರಿ ಅವರು ಭಾರತೀಯ ರಾಯಭಾರ ಕಚೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಚೈತಿ ಆರ್ಟ್ಸ್ ಫೌಂಡೇಶನ್ ನಿರ್ಮಿಸಿದ ವಂದೇ ಮಾತರಂ ನ ವಿಶೇಷ ವಾದ್ಯ ಸಂಗೀತದಿಂದ ಸಂಯೋಜಿಸಲಾದ ಗೀತೆಯನ್ನು ಬಿಡುಗಡೆಗೊಳಿಸಲಾಯಿತು. ಇದರೊಂದಿಗೆ ಮಿಸ್ರಿ ಅವರು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಭಾಷಣವನ್ನು ಓದಿ ಸಂದೇಶ ನೀಡಿದರು. 

ಕೋವಿಡ್ 19 ಹಿನ್ನೆಲೆ ಬೀಜಿಂಗ್, ಚೀನಾದ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಿಷನ್ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಮಾತ್ರ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಲಾಗಿತ್ತು. 


 ಇನ್ನು, ಸಿಂಗಾಪುರದಲ್ಲಿ ಕೋವಿಡ್ 19 ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಗಣರಾಜ್ಯೋತ್ಸವ ಸಮಾರಂಭವನ್ನು ಹೈಕಮಿಷನ್‌ನ ಸದಸ್ಯರಿಗೆ ಮಾತ್ರ ಸೀಮಿತಗೊಳಿಸಿ ಆಚರಿಸಲಾಯಿತು. ಈ ವೇಳೆ ಭಾರತದ ಹೈಕಮಿಷನರ್ ಪಿ.ಕುಮಾರನ್ ಅವರು ರಾಷ್ಟ್ರದ ಧ್ವಜಾರೋಹಣಗೈದರು. ಜೊತೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಸಂದೇಶವನ್ನು ಫೇಸ್ ಬುಕ್ ಲೈವ್ ಸ್ಟ್ರೀಮಿಂಗ್ ನಲ್ಲಿ ಓದಿದರು.Attachments area

Leave a Reply

Your email address will not be published. Required fields are marked *

error: Content is protected !!