ಭಾರತದಿಂದ ಬ್ರೆಜಿಲ್ ಗೆ ಲಸಿಕೆ: ಅಧ್ಯಕ್ಷರ ದನ್ಯವಾದದಲ್ಲಿ ರಾಮಾಯಣ ಉಲ್ಲೇಖ

ರಿಯೋ ಡಿ ಜನೈರೊ: ಭಾರತದಿಂದ ಬ್ರೆಜಿಲ್ ಸರ್ಕಾರವು ಜ.22 ರಂದು ಬರೋಬ್ಬರಿ 2 ಮಿಲಿಯನ್ ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಂಡಿದೆ. ಈ ನಡುವೆ  ದಕ್ಷಿಣ ಅಮೆರಿಕಾದ ಅತಿದೊಡ್ಡ ರಾಷ್ಟ್ರವಾದ ಬ್ರೆಜಿಲ್‌ಗೆ ಎರಡು ಮಿಲಿಯನ್ ಕೊರೊನಾವೈರಸ್ ಲಸಿಕೆಯನ್ನು ತಲುಪಿಸಿದ ಭಾರತಕ್ಕೆ, ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ ಅವರು ವಿಶೇಷವಾದ ರೀತಿಯಲ್ಲಿ ಧನ್ಯವಾದ ತಿಳಿಸಿದ್ದಾರೆ. 

ಕೊರೊನಾವೈರಸ್ ಲಸಿಕೆಗಳನ್ನು ಭಾರತವು ಬ್ರೆಜಿಲ್‌ಗೆ ಕಳುಹಿಸಿಕೊಟ್ಟು ನಮ್ಮ ಪ್ರಜೆಗಳ ಜೀವ ಉಳಿಸಲಾಗಿದೆ ಎಂದು, ಬ್ರೆಜಿಲ್‌ಗೆ ಕೊರೋನಾ ವೈರಸ್ ತಲುಪಿಸಿದ ಭಾರತವನ್ನು ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತು ತಂದು ಲಕ್ಷಣನಿಗೆ ಜೀವದಾನ ನೀಡಿದ ಹನುಮನಿಗೆ ಹೋಲಿಸಿ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ನಮಸ್ಕಾರ ಪ್ರಧಾನಿ ನರೇಂದ್ರ ಮೋದಿ ಅವರೇ, ಇಂತಹ ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಭಾರತದಂತಹ ಸ್ನೇಹಿತ ನಮ್ಮೊಂದಿಗಿರುವುದು ಹೆಮ್ಮೆಯನ್ನು ಮೂಡಿಸುತ್ತದೆ.

ಭಾರತದಿಂದ ಬ್ರೆಜಿಲ್‌ಗೆ ಲಸಿಕೆ ರಫ್ತು ಮಾಡಿ ಸಹಾಯ ಮಾಡಿದಕ್ಕಾಗಿ ಧನ್ಯವಾದಗಳು ಎಂದಿರುವ ಅವರು, ಹನುಮಂತ ಸಂಜೀವಿನಿ ಹೊತ್ತು ಭಾರತದಿಂದ ಬ್ರೆಜಿಲ್‌ಗೆ ಜಿಗಿಯುತ್ತಿದ್ದಾರೆ. ಪರ್ವತವನ್ನು ಹೋಲುವ ರೀತಿಯಲ್ಲಿ ಲಸಿಕೆ ಮತ್ತು ಸಿರಿಂಜ್‌ಗಳು ಕಾಣುವ ಚಿಹ್ನೆಗಳಿರುವ ಫೋಟೋವನ್ನು ಆ್ಯಡ್ ಮಾಡಿ  ಧನ್ಯವಾದಗಳು ಭಾರತ’ ಎಂದು ತಮ್ಮ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!