ಸುರತ್ಕಲ್-ಹೆಜಮಾಡಿ ಟೋಲ್ ವಿಲೀನ: ಡಬಲ್ ಇಂಜಿನ್ ಸರಕಾರದ ಡಬಲ್ ಲೂಟಿ: ರಮೀಜ್ ಹುಸೇನ್

ಉಡುಪಿ ನ.26 (ಉಡುಪಿ ಟೈಮ್ಸ್ ವರದಿ)  : ಟೋಲ್ ಮೂಲಕ ಜನರ ಸುಲಿಗೆ ನಡೆಸಿ ಜನ ಸಾಮಾನ್ಯರ ಬದುಕಿಗೆ ಕೂಳ್ಳಿ ದೀಪ ಇಡಲು ಸರಕಾರ ತಯಾರಿ ನಡೆಸುತ್ತಿದೆ. ಇದು ಡಬಲ್ ಇಂಜಿನ್ ಸರಕಾರದ ಡಬಲ್ ಲೂಟಿ ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಹೇಳಿದ್ದಾರೆ.

ಸುರತ್ಕಲ್ ಮತ್ತು ಹೆಜಮಾಡಿ ಟೋಲ್ ವಿಲೀನ ಗೊಳಿಸಿ ದುಪ್ಪಟ್ಟು ಸುಂಕ ನಿಗದಿ ಮಾಡಿರುವ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದುಪ್ಪಟ್ಟು ದರವನ್ನು ರದ್ದುಗೊಳಿಸದ್ದಿದಲ್ಲಿ ಯುವ ಕಾಂಗ್ರೆಸ್ ಜನ ವಿರೋಧಿ ನಿರ್ಧಾರದ ವಿರುದ್ಧ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆಗೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅತ್ಯಂತ ಕಠೋರ ಹೃದಯದ ಜನ ವಿರೋಧಿ ಸರಕಾರದ ನಿರ್ಧಾರ ಜನರ ಬದುಕಿನಲ್ಲಿ ಚಲ್ಲಾಟ ನಡೆಸುತಿದೆ. ಸುರತ್ಕಲ್ ಟೋಲ್ ಅನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಸಮಾನ ಮನಸ್ಕರನ್ನು ಸೇರಿಸಿ ಟೋಲ್ ಹೋರಾಟ ಸಮಿತಿ ಅನಿರ್ದಿಷ್ಟ ಅವಧಿ ಹಗಲು ರಾತ್ರಿ ಧರಣಿಯನ್ನು ಹಮ್ಮಿಕೊಂಡಿರುವ ಪರಿಣಾಮ ಸುರತ್ಕಲ್ ಟೋಲ್ ಅನ್ನು ರದ್ದು ಮಾಡುತ್ತೇವೆ ಅನ್ನುತ್ತಿದ್ದ ಜನಪ್ರತಿನಿಧಿಗಳು, ಇಂದು ವಿಲೀನದ ನೆಪ ಹೇಳಿ ಸುರತ್ಕಲ್ ಟೋಲ್ ದರವನ್ನು ಹೆಜಮಾಡಿ ಟೋಲ್ ನಲ್ಲಿ ಪೂರ್ತಿಯಾಗಿ ಸೇರಿಸಿ ಹಣ ಸಂಗ್ರಹಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಈ ದುಪ್ಟಟು ದರವನ್ನು ಜನ ಸಾಮಾನ್ಯರು ಕಟ್ಟುವಂತಹ ಪರಿಸ್ಥಿತಿ ಒದಗಿ ಬಂದಿದೆ. ದಿನದಿಂದ ದಿನಕ್ಕೆ ಗಗನಕ್ಕೆ ಏರುತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಒಂದಡೆಯಾದರೆ, ಈಗ ಟೋಲ್ ಮೂಲಕ ಜನರ ಸುಲಿಗೆ ನಡೆಸಿ ಜನ ಸಾಮಾನ್ಯ ನ ಬದುಕಿಗೆ ಕೂಳ್ಳಿ ದೀಪ ಇಡಲು ಸರಕಾರ ತಯಾರಿ ನಡೆಸುತಿದೆ ಇದೇ ರೀತಿ ಮುಂದುವರಿದಲ್ಲಿ ಅರ್ಥಿಕವಾಗಿ ಕುಗ್ಗಿರುವ ಜನರ ಬದುಕು ಕಂಗಲಾಗುವ ಪರಿಸ್ಥಿತಿಗೆ ಬರುವಂತೆ ಈ ಸರಕಾರ ಮಾಡುತಿದೆ ಎಂದಿದ್ದಾರೆ.

ಹಾಗೂ ಈಗಾಗಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಷ್ಕೃತ ದರದಲ್ಲಿ ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್ ನಲ್ಲಿ ದುಪ್ಪಟ್ಟು ಟೋಲ್ ವಸೂಲಿ ನಡೆಯಲಿದೆ. ಇದರಿಂದ ಹೆಜಮಾಡಿ, ಪಡುಬಿದ್ರಿ ಆಸುಪಾಸಿನ ಜನರು ಕೇವಲ 6 ಕಿ.ಮಿ ದೂರದ ಮುಲ್ಕಿಗೆ ಕಾರಿನಲ್ಲಿ ಹೋಗಿ ಬರಬೇಕಾದರೆ ಹೆಜಮಾಡಿ ಟೋಲ್ ನಲ್ಲಿ 155 ರೂಪಾಯಿಯನ್ನು ಕಟ್ಟಬೇಕಾಗಿದೆ ಇಂತಹ ಹಗಲು ದರೋಡೆಯನ್ನು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ ಇದು ಡಬಲ್ ಇಂಜಿನ್ ಸರಕಾರದ ಡಬಲ್ ಲೂಟಿ, ಇಷ್ಟಾದರೂ ಸರಕಾರ ನಡೆಸುತಿರುವ ಸ್ಥಳೀಯ ಶಾಸಕರು, ಸಂಸದರು ಧ್ವನಿ ಎತ್ತದಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!