ಟೋಲ್’ನಲ್ಲಿ ದುಪ್ಪಟ್ಟು ಸುಂಕ ವಸೂಲಿಗೆ ನಿರ್ಧಾರ- ಜನತೆಗೆ ಸಂಸದರು ಎಸೆಗಿದ ದ್ರೋಹ

ಸುರತ್ಕಲ್ ಟೋಲ್ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿಯಲ್ಲಿ ಸುಲಿಗೆ ನಡೆಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ ಅಂದರೆ ಸರಕಾರದ ನಿರ್ಧಾರ ಇದು ಎರಡು ಜಿಲ್ಲೆಯ ಜನತೆಗೆ  ಸಂಸದರು ಎಸೆಗಿದ ದ್ರೋಹ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎಲ್ಲಾ ಕಡೆ ಸರ್ವಿಸ್ ರಸ್ತೆ ಕಾಮಗಾರಿ ನಿರ್ಮಾಣ ಮಾಡಿ  ಅಪಘಾತಗಳು ಆಗದ ರೀತಿಯಲ್ಲಿ ಮುಂದಿನ ಕಾಮಗಾರಿ ನಿರ್ವಹಿಸಬೇಕು. ಬಸ್ ಬೇ ಮತ್ತು ಲಾರಿ ಬೇ ನಿರ್ಮಾಣವಾಗಬೇಕು, ಬೀದಿ ದೀಪಗಳು ಕೆಟ್ಟು ಹೋಗಿದ್ದು ಕೆಲವು ಜಂಕ್ಷನ್ ಗಳಲ್ಲಿ ಕತ್ತಲು ಆವರಿಸಿದ್ದು, ರಾತ್ರಿ ಸಂಚರಿಸುವ ವಾಹನಗಳು ಅಪಘಾತಗಳಿಗೆ ಸಿಲುಕಿ ನೂರಾರು ಜನರು ಪ್ರಾಣ ಕಳೆದುಕೊಂಡಿರುತ್ತಾರೆ.

ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ ಮತ್ತು ಕೆಲವು ಅಂಡರ್ ಪಾಸ್ ಗಳಲ್ಲಿ ದೀಪಗಳು ಉರಿಯದೆ ಇದೆ, ಮಾರ್ಕಿಂಗ್ ಗಳು ಕಾಣದೇ ಮತ್ತು ಗಾರ್ಡನ್ ನಿರ್ವಹಣೆಗಳು ಸರಿಯಾದ ರೀತಿಯಲ್ಲಿ ಆಗದೆ ಇದ್ದು, ಇದನ್ನೆಲ್ಲಾ ಸಮರ್ಪಕವಾಗಿ  ಕಾರ್ಯನಿರ್ವಹಿಸುವಂತೆ  ವ್ಯವಸ್ಥೆಗೊಳಿಸಬೇಕು.

ಟೋಲ್ ವಿಲೀನದ ಪರಿಣಾಮ ದುಬಾರಿ ಸುಂಕ ನೀಡುವ ಪರಿಸ್ಥಿತಿ ಬಂದಿರುವುದು ಕರಾವಳಿ ಜಿಲ್ಲೆಯ ಜನರ ದೌರ್ಭಾಗ್ಯ ಜನರ ಭಾವನೆ ಕಷ್ಟ ಸುಖಗಳಿಗೆ ಸರಕಾರ ಸ್ಪಂದಿಸುವರೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಹಿಂದೆಯೂ ಟೋಲ್ ರದ್ಧತಿ ಹೋರಾಟದಲ್ಲಿ ಪಾಲ್ಗೊಂಡಿದ್ದೆವು ಇನ್ನು ಮುಂದಿನ ದಿನಗಳಲ್ಲಿ ಜನತಾದಳ (ಜಾತ್ಯತೀತ )ಪಕ್ಷದ ವತಿಯಿಂದ ನಮ್ಮದೇ ಆದ ರೀತಿಯಲ್ಲಿ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!