ಅಲೆವೂರು: ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

ಉಡುಪಿ, ಜೂ.5; ಅಲೆವೂರು ಜೋಡುರಸ್ತೆ ಸಂತೆ ಮಾರ್ಕೆಟ್ ಬಳಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಹರೀಶ್ ಕಿಣಿ, ಯತೀಶ್ ಅವರ ಸಹಕಾರದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು.

ಪರೀಕ್ಷಿಸಿದ ವೈದ್ಯರು ಅದಾಗಲೇ ರೋಗಿ ಮೃತಪಟ್ಟಿರುವುದನ್ನು ಧೃಡಿಕರಿಸಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದೆ. ಮೃತ ವ್ಯಕ್ತಿಗೆ ವಯಸ್ಸು 50 ಅಂದಾಜಿಸಲಾಗಿದೆ. ಹೆಸರು ವಿಳಾಸ ತಿಳಿದುಬಂದಿಲ್ಲ. ಸಂತೆ ವ್ಯಾಪಾರಕ್ಕೆ ಬಂದಿರುವ ವ್ಯಾಪಾರಿಯೆಂದು ಶಂಕಿಸಲಾಗಿದೆ. ವಾರಸುದಾರರು ಆಸ್ಪತ್ರೆಯ ನಾಗರಿಕ ಸಹಾಯಕ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!