ಬೈಲೂರು: ಸೆಲೂನ್ ಮಾಲೀಕ ಆತ್ಮಹತ್ಯೆ

ಕಾರ್ಕಳ: ಅನಾರೋಗ್ಯದಿಂದ ಜೀವನದಲ್ಲಿ ಮನನೊಂದು ಸೆಲೂನ್ ಮಾಲೀಕರೋರ್ವರು ಬಾವಿಯ ಪೈಪ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಜೂ.4ರಂದು ರಾತ್ರಿ ನಡೆದಿದೆ.

ನೀರೆ ಗ್ರಾಮದ ನಿವಾಸಿ 72 ವರ್ಷದ ಕುಟ್ಟಿ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಬೈಲೂರಿನಲ್ಲಿ ಸಾಲಿಯಾನ್ ಹೇರ್ ಕಟ್ಟಿಂಗ್ ಸೆಲೂನ್ ನಡೆಸಿಕೊಂಡಿದ್ದರು. ಅಸ್ತಮಾ ಮತ್ತು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದ ಕಾರಣಕ್ಕಾಗಿ ಮನನೊಂದು ನಿನ್ನೆ ಸಂಜೆ ಸೆಲೂನ್‌ನ ಹಿಂಭಾಗದ ಬಾವಿಯ ಪೈಪಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್: 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!