ಮಂಗಳೂರು: ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್‌ ಬೆಂಕಿಗಾಹುತಿ

ಮಂಗಳೂರು, ಜೂ.05: ಚಾರ್ಜ್‌ಗೆ ಇರಿಸಿದ ಕೆಲವೇ ಗಂಟೆಯ ಇಲೆಕ್ಟ್ರಿಕಲ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ನಗರದ ಬೋಂದೆಲ್ ಸಮೀಪದ ಕೆ.ಎಚ್.ಕಾಲನಿಯಲ್ಲಿ ಭಾನುವಾರ ನಡೆದಿದೆ.

ಇಲೆಕ್ಟ್ರಿಕಲ್ ಸ್ಕೂಟರ್‌ನ ಮಾಲಕ ಚಾರ್ಜ್‌ಗೆ ಇಂದು ಬೆಳಿಗ್ಗೆ ಇಟ್ಟಿದ್ದರು. ಆದರೆ ಚಾರ್ಜ್‌ಗೆ ಇರಿಸಿದ ಕೆಲವೇ ಗಂಟೆಯಲ್ಲಿ ಸ್ಕೂಟರ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ತತ್‌ಕ್ಷಣ ಸ್ಕೂಟರ್‌ ಸ್ಪೋಟಗೊಂಡಿದೆ. ಸ್ಕೂಟರ್‌ನ ಯಂತ್ರಗಳು, ಬಿಡಿಭಾಗಗಳು ಸೇರಿದಂತೆ ಸಂಪೂರ್ಣ ಸ್ಕೂಟರ್‌ ಸುಟ್ಟು ಕರಕಲಾಗಿದೆ.

Leave a Reply

Your email address will not be published. Required fields are marked *

error: Content is protected !!