ರೆಸ್ಟೊರೆಂಟ್‌ಗಳು ಗ್ರಾಹಕರಿಗೆ ‘ಸೇವಾ ಶುಲ್ಕ’ ವಿಧಿಸುವಂತಿಲ್ಲ

ನವದೆಹಲಿ: ರೆಸ್ಟೊರೆಂಟ್‌ಗಳು ಗ್ರಾಹಕರಿಗೆ ‘ಸೇವಾ ಶುಲ್ಕ’ ವಿಧಿಸುವಂತಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಹೇಳಿದ್ದಾರೆ. ಆದರೆ ಗ್ರಾಹಕರು ಸ್ವ ಇಚ್ಛೆಯಿಂದ ಪ್ರತ್ಯೇಕವಾಗಿ “ಟಿಪ್ಸ್” ನೀಡಬಹುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರೆಸ್ಟೋರೆಂಟ್ ಮಾಲೀಕರು ತಮ್ಮ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ನೀಡಲು ಬಯಸಿದರೆ, ದೇಶದಲ್ಲಿ ಯಾವುದೇ ಬೆಲೆ ನಿಯಂತ್ರಣಗಳಿಲ್ಲದ ಕಾರಣ ಅವರು ಆಹಾರದ ಮೆನುವಿನಲ್ಲಿ ದರಗಳನ್ನು ಹೆಚ್ಚಿಸಲು ಮುಕ್ತರಾಗಿದ್ದಾರೆ ಎಂದು ಗೋಯಲ್ ಹೇಳಿದ್ದಾರೆ. ಸೇವಾ ಶುಲ್ಕವನ್ನು ರದ್ದುಗೊಳಿಸಿದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂಬ ರೆಸ್ಟೋರೆಂಟ್ ಮಾಲೀಕರ ವಾದವನ್ನು ಕೇಂದ್ರ ಸಚಿವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್  ನೇತೃತ್ವದಲ್ಲಿ ಭಾರತದ ರಾಷ್ಟ್ರೀಯ ರೆಸ್ಟೋರೆಂಟ್ ಅಸೋಷಿಯೇಷನ್, ಫೆಡರೇಷನ್ ಆಫ್ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಷಿಯೇಷನ್ಸ್ ಆಫ್ ಇಂಡಿಯಾ ಹಾಗೂ ಗ್ರಾಹಕ ಸಂಘಟನೆಗಳ ಪ್ರತಿನಿಧಿಗಳ ಸಭೆ ಗುರುವಾರ ನಡೆಯಿತು. ಈ ಸಭೆಯಲ್ಲಿ ಹೋಟೆಲ್ ಸಂಘಟನೆಗಳ ಪ್ರತಿನಿಧಿಗಳು ಮೆನುವಿನಲ್ಲಿ ಉಲ್ಲೇಖಿಸಿರುವ ಸೇವಾ ಶುಲ್ಕಕ್ಕೆ ಗ್ರಾಹಕರ ಅನುಮತಿಯೂ ಇದೆ ಎಂದು ಸಮರ್ಥಿಸಿಕೊಂಡರು. ಆದರೆ, ಅವರ ಈ ಸಮರ್ಥನೆಯನ್ನು ಸಚಿವಾಲಯ ತಳ್ಳಿ ಹಾಕಿದೆ.

Leave a Reply

Your email address will not be published. Required fields are marked *

error: Content is protected !!