ನೋಟಿನ ಮಳೆ…! ಬಾಚಿಕೊಳ್ಳಲು ಮುಗಿಬಿದ್ದ ಜನತೆ…!

ಬಂಟ್ವಾಳ ಜೂ.3: ಕಟ್ಟಡವೊಂದರ ಕೊಠಡಿಯಿಂದ ಹಣ ಬೀಳುವುದನ್ನು ಕಂಡು ಜನರು ಹೆಕ್ಕಿಕೊಳ್ಳಲು ಮುಗಿಬಿದ್ದಿರುವ ಘಟನೆ ದ.ಕ ಜಿಲ್ಲೆಯ ಬಿ.ಸಿ.ರೋಡ್ ನಲ್ಲಿ ನಡೆದಿದೆ.

ಬಿ.ಸಿ.ರೋಡ್ ನ ಕಟ್ಟಡದಲ್ಲಿ ನಡೆಯುತ್ತಿದ್ದ ಕ್ಲಬ್ ವೊಂದರಲ್ಲಿ ಅಕ್ರಮ ಜೂಜಾಟ ನಡೆಯುತ್ತಿದೆ ಎಂಬ ಬಗ್ಗೆ ಕೇಳಿ ಬಂದ ದೂರಿನ ಹಿನ್ನಲೆಯಲ್ಲಿ ಪೊಲೀಸ್ ನಿರೀಕ್ಷಕ ವಿವೇಕಾನಂದ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಜೂಜಾಟದಲ್ಲಿ ತೊಡಗಿದ್ದವರು ಪೊಲೀಸ್ ದಾಳಿಯಿಂದ ಗಂಗಾಲಾಗಿದ್ದಾರೆ, ಕೆಲವರು ಕಿಟಕಿಗಳ ಮೂಲಕ ನೋಟುಗಳನ್ನು ಕೆಳಗೆ ಎಸೆದಿದ್ದಾರೆ.

ಇತ್ತ ಕಟ್ಟಡದ ಕಿಟಕಿಯಿಂದ ಕಂತೆ ಕಂತೆ ನೋಟುಗಳು ಕೆಳಗೆ ಬೀಳುತ್ತಿರುವುದನ್ನು ಕಂಡ ಜನರು ಆ ನೊಟುಗಳನ್ನು ಆಯ್ದುಕೊಳ್ಳಲು ಮುಗಿಬಿದ್ದಿದ್ದರು.

Leave a Reply

Your email address will not be published. Required fields are marked *

error: Content is protected !!