ಕಾಪು: ಮಾದಕ ವಸ್ತು ಸೇವನೆ- ಯುವಕ ವಶಕ್ಕೆ

ಕಾಪು ಜೂ.3 (ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಕಾಪುವಿನ ಏಣಗುಡ್ಡೆ ಪರಿಸರದಲ್ಲಿ ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಏಣಗುಡ್ಡೆ ಗ್ರಾಮದ ಅಶ್ಲೇಷ್ ಎ. ಕೋಟ್ಯಾನ್ (22) ಪೊಲೀಸರು ವಶಕ್ಕೆ ಪಡೆದ ಯುವಕ. ಮೇ 31 ರಂದು ಬೆಳಿಗ್ಗೆ ಕಾಪು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ ಮುರಗೋಡ ಅವರು ಇತರ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಏಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ಹತ್ತಿರ ಅಮಲಿನಲ್ಲಿದ್ದಂತೆ ಕಂಡ ಯುವಕನೋರ್ವನನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ನಿನ್ನೆ ಈತನ ವೈದ್ಯಕೀಯ ಪರೀಕ್ಷಾ ವರದಿ ಲಭಿಸಿದ್ದು ಯುವಕ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!