ಸೌತಡ್ಕ ದೇವಸ್ಥಾನ ಬಳಿ ಹಿಂದೂಯೇತರರ ವಾಹನಗಳಿಗೆ ಪ್ರವೇಶ ನಿಷೇಧ ಬ್ಯಾನರ್ ಪ್ರತ್ಯಕ್ಷ

ಬೆಳ್ತಂಗಡಿ ಜೂ.3: ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತೆರಳುವ ರಸ್ತೆಯ ಗೇಟ್ ಸಮೀಪ ಹಿಂದೂಯೇತರರ ವಾಹನಗಳಿಗೆ ಪ್ರವೇಶಕ್ಕೆ ನಿಷೇಧ ಹೇರಿ ಬ್ಯಾನರ್ ವೊಂದನ್ನು ಅಳವಡಿಸಿರುವ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯ ಪಿಡಿಒಗೆ ನೋಟೀಸು ನೀಡಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು,”ಈ ವಿಷಯ ಮಾಧ್ಯಮದ ಮೂಲಕವಷ್ಟೆ ನಮ್ಮ ಗಮನಕ್ಕೆ ಬಂದಿದೆ. ಯಾರಿಂದಲೂ ಈ ಬಗ್ಗೆ ದೂರು ಬಂದಿಲ್ಲ. ಈ ಬಗ್ಗೆ ಸ್ಥಳೀಯ ಪಿಡಿಒಗೆ ನೋಟೀಸು ನೀಡಲಾಗಿದೆ. ಈ ವಿಚಾರವಾಗಿ ಬ್ಯಾನರ್ ನ್ನು ದೇವಸ್ಥಾನ ಜಾಗದಲ್ಲಿ ದೇವಸ್ಥಾನದವರೆ ಹಾಕಿರುವುದೇ, ಸಾರ್ವಜನಿಕ ಜಾಗದಲ್ಲಿ ಹಾಕಿರುವುದೇ, ಸ್ಥಳೀಯಾಡಳಿತದಿಂದ ಅನುಮತಿ ಪಡೆಯಲಾಗಿದೆಯೇ ಎಂದೆಲ್ಲಾ ಕೇಳಲಾಗಿದೆ. ಅದನ್ನು ಪರಿಶೀಲನೆ ಮಾಡಿ, ತೆರವುಗೊಳಿಸುವ ಕ್ರಮ ವಹಿಸುವುದು ಸ್ಥಳೀಯಾಡಳಿತಕ್ಕೆ ಸಂಬಂಧಿಸಿದ್ದಾಗಿದೆ. ಈ ಬಗ್ಗೆ ಪಿಡಿಒ ಅವರನ್ನು ಕೇಳಲಾಗಿದೆ” ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ, ಹಿಂದೂ ಯುವತಿಯರನ್ನು ರಿಕ್ಷಾದಲ್ಲಿ ಕರೆದೊಯ್ಯುವ ವಿಚಾರವಾಗಿ ತಂಡವೊಂದು ಮುಸ್ಲಿಂ ರಿಕ್ಷಾ ಚಾಲಕರಿಗೆ ಹಲ್ಲೆ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ ಬ್ಯಾನರ್ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್ ಭಜರಂಗದಳ, ಹಿಂದೂ ಜಾಗರಣ ವೇದಿಕೆ ಕೊಕ್ಕಡ ಎಂಬ ಹೆಸರಿನಲ್ಲಿ ಈ ಬ್ಯಾನರ್ ಅಳವಡಿಸಲಾಗಿದ್ದು, ಅದರಲ್ಲಿ “ಹಿಂದೂಗಳ ಶ್ರದ್ಧಾ ಕೇಂದ್ರವಾದ ನಮ್ಮ ಊರಿನ ಪುಣ್ಯಕ್ಷೇತ್ರ ಸೌತಡ್ಕದಲ್ಲಿ ಅನ್ಯಕೋಮಿನವರು ಪ್ರವೇಶ ಮಾಡಿ ಭಕ್ತಾದಿಗಳನ್ನು ಲೌವ್ ಜಿಹಾದ್ ಹಾಗೂ ದುಷ್ಕøತ್ಯ ನಡೆಸಿರುವುದು ಕಂಡುಬಂದಿರುವುದರಿಂದ ಹಿಂದೂಯೇತರ ಜನರ ಆಟೋ ಮತ್ತು ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿಬರ್ಂಧ ವಿಧಿಸಲಾಗಿದೆ’ ಎಂದು ಬರೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!