ಲಯನ್ಸ್ ಕ್ಲಬ್, ಲಯನ್ಸ್ ಕ್ಲಬ್ ಜಾಸ್ಮಿನ್ ಮತ್ತು ಲಿಯೋ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಉಡುಪಿ ಜು.25(ಉಡುಪಿ ಟೈಮ್ಸ್ ವರದಿ): ಲಯನ್ಸ್ ಕ್ಲಬ್ ಬಂಟಕಲ್ – ಬಿಸಿ ರೋಡ್ ಹಾಗೂ ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಮತ್ತು ಲಿಯೋ ಕ್ಲಬ್ ಇದರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ಬಂಟಕಲ್ ನ ಝಿಝೋ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮ ದಲ್ಲಿ ಪದಗ್ರಹಣ ಅಧಿಕಾರಿ ಆಗಿರುವ ಲ. ಮಹಮ್ಮದ್ ಹನೀಫ್ ಎಂ.ಜೆ.ಎಫ್ ಅವರು ಪದಾಧಿಕಾರಿಗಳಿಗೆ ಪದಪ್ರಧಾನ ಮಾಡಲಿದ್ದಾರೆ.

ಲಯನ್ಸ್ ಕ್ಲಬ್ ಬಂಟಕಲ್ ಬಿಸಿ ರೋಡ್ ಇದರ ನೂತನ ಸಾಲಿನ ಅಧ್ಯಕ್ಷರಾಗಿ ಲ. ಎಡ್ವರ್ಡ್ ಮಿನೇಜಸ್ ಪಲ್ಕೆ ಪಾಂಬೂರು ಅಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ ಕಾರ್ಯದರ್ಶಿ ಲ. ಅನಿತಾ ಡಿಸಿಲ್ವ, ಖಜಾಂಚಿಯಾಗಿ ಲ.ರೋನಿ ಕ್ವಾರ್ಡಸ್ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಇದರೊಂದಿಗೆ ಈ ವರ್ಷ ನೂತನವಾಗಿ ಆರಂಭಗೊಂಡಿರುವ ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಇದರ ಅಧ್ಯಕ್ಷರಾಗಿ ಲ. ಮಾಬೆಲ್ ಮಿನೇಜಸ್, ಕಾರ್ಯದರ್ಶಿಯಾಗಿ ಲ. ಅನೀತಾ ಮೆಂಡೋಸಾ, ಖಜಾಂಚಿ ಯಾಗಿ ಲ. ಐರನ್ ಸಿಕ್ವರಾ, ಮತ್ತು ಲಿಯೋ ಕ್ಲಬ್ ಇದರ ಅಧ್ಯಕ್ಷರಾಗಿ ಲಿಯೋ ಗ್ಲೆನ್, ಕಾರ್ಯದರ್ಶಿಯಾಗಿ ಲಿಯೋ ಅರೋನ್ ಡಿಸೋಜಾ, ಖಜಾಂಚಿಯಾಗಿ ಲಿಯೋ ನಿಶಾಂತ್ ಪದಗ್ರಹಣ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಲೈಫ್ ಸೇವರ್ ವಾಟರ್ ಬಾಯ್ ಈಶ್ವರ್ ಮಲ್ಪೆ ಅವರನ್ನು ಗೌರವಿಸಲಾಗುವುದು ಎಂದು ಲಯನ್ಸ್ ಸಂಸ್ಥೆ ತಿಳಿಸಿದೆ.

ಲಯನ್ಸ್ ಕ್ಲಬ್ ಬಂಟಕಲ್ ಬಿಸಿ ರೋಡ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲ. ಎಡ್ವರ್ಡ್ ಮಿನೇಜಸ್ ಪಲ್ಕೆ ಪಾಂಬೂರು ಅವರು ಬಂಟಕಲ್ ನಿವಾಸಿಯಾಗಿದ್ದು, ಯುಎಸ್(ಅಮೇರಿಕಾ) ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಇವರು ತಮ್ಮ ಹುಟ್ಟೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಕೃಷಿಕರಾಗಿ ತೋಟಗಾರಿಗೆ ಬೆಳೆ ಹಾಗೂ ಮಲ್ಲಿಗೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!