ಬೈಂದೂರು: ಕೋಳಿ ಅಂಕಕ್ಕೆ ದಾಳಿ, ಇಬ್ಬರು ವಶಕ್ಕೆ

ಬೈಂದೂರು ಜು.6(ಉಡುಪಿ ಟೈಮ್ಸ್ ವರದಿ): ಬೈಂದೂರಿನ ಬಿಜೂರು ಗ್ರಾಮದ ಕೋಟ್ಯಾಡಿ ಎಂಬಲ್ಲಿನ ಸರಕಾರಿ ಜಾಗದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಮ್ಮದ್ ಇರ್ಷಾದ್ (36),  ಮಹಮ್ಮದ್ ಜಾಹೀರ್ (34) ಪೊಲೀಸರು ವಶಕ್ಕೆ ಪಡೆದವರು.

ಪೊಲೀಸ್ ದಾಳಿ ವೇಳೆ ರಾಜು, ಶೇಖರ ಹಾಗೂ ಭರತ್ ಎಂಬವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಕೋಳಿ ಅಂಕ ನಡೆಯುತ್ತಿರುವುದು ಕಂಡು ಬಂದಿದೆ. ಈ ವೇಳೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಕೋಳಿ ಅಂಕಕ್ಕೆ ಬಳಸಿದ 5 ಕೋಳಿಗಳು, ಕೋಳಿಯ ಕಾಲಿಗೆ ಕಟ್ಟಿದ 2 ಕತ್ತಿ, 1500 ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!