ಬ್ಯಾಂಕ್ ಗಳ ಖಾಸಗೀಕರಣ: ಮುಂದೆ ನಮ್ಮದೇ ಹಣ ನಾವು ಪಡೆಯಲು ತೊಂದರೆ ಆಗಬಹುದು

ಉಡುಪಿ: ಬ್ಯಾಂಕ್ ಯೂನಿಯನ್ ಗಳ ಸಂಯುಕ್ತ ವೇದಿಕೆ ವತಿಯಿಂದ ಸಾರ್ವಜನಿಕ ವಲಯಗಳ ಬ್ಯಾಂಕುಗಳ ಖಾಸಗೀ ಕರಣವನ್ನು ಖಂಡಿಸಿ ದೇಶದಾದ್ಯಂತ ಕೈಗೊಂಡಿರುವ ಎರಡು ದಿನಗಳ ಸಾರ್ವತ್ರಿಕ ಪ್ರತಿಭಟನೆ ಇಂದು ಉಡುಪಿಯಲ್ಲಿ ನಡೆಯಿತು. ಈ ನಿಟ್ಟಿನಲ್ಲಿ  ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿಯ ಕೆನರಾ ಬ್ಯಾಂಕ್ ಕೋರ್ಟ್ ರೋಡ್ ಶಾಖೆಯ ಬಳಿ ಪ್ರತಿಭಟನಾ ಸಭೆ ಹಾಗೂ ಧರಣಿ ಕಾರ್ಯಕ್ರಮ ನಡೆಸಲಾಯಿತು. ಈ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟನಾ ನಿರತರು ಖಂಡಿಸಿದರು.

ಈ ವೇಳೆ ಎಐಬಿಇಎ ಮುಖಂಡರಾದ ರಮೇಶ್, ಎಐಬಿಒಸಿ  ಮುಖಂಡರಾದ ಅಶೋಕ್ ಕೋಟ್ಯಾನ್, ಎನ್‍ಸಿಬಿಇ  ಮುಖಂಡರಾದ ಸುಪ್ರಿಯಾ, ಎಐಬಿಒಎ ಮುಖಂಡರಾದ ರವಿಶಂಕರ್, ಬಿಇಎಫ್‍ಐ ಮುಖಂಡರಾದ ರವೀಂದ್ರ, ಕೆನರಾ ಬ್ಯಾಂಕಿನ ಮರಿಯೋ ಮಥಾಯಿಸ್, ಅವಿನಾಶ್ ಹೆಗ್ಡೆ, ಪ್ರೇಮನಾಥ್ ಪೂಜಾರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾಗೇಶ್ ನಾಯಕ್, ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್, ಸಿಐಟಿಯು ನ ಬಾಲಕೃಷ್ಣ ಶೆಟ್ಟಿ ಮೊದಲಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಮಾತನಾಡಿದ ಪ್ರತಿಭಟನಾ ನಿರತರು, ಬ್ಯಾಂಕ್‍ಗಳ ಖಾಸಗೀಕರಣದಿಂದ ಈ ಹಿಂದಿನ ಯಾವುದೇ ರೈಟ್ಸ್‍ಗಳು ಉಳಿಯುವುದಿಲ್ಲ. ಅವರವರ ಲಾಭಕ್ಕಾಗಿ ಬ್ಯಾಂಕ್ ಗಳನ್ನು ನಡೆಸುತ್ತಾರೆ ಹೊರತು ಜನರ ಕಲ್ಯಾಣಕ್ಕಾಗಿ ಅಲ್ಲ. ಈ ಹಿಂದೆ ಹಳ್ಳಿ ಹಳ್ಳಿಗಳಲ್ಲಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಿ ಅಲ್ಲಿ ಜನರಿಗಾಗಿ ಸೌಲಭ್ಯಗಳನ್ನು ನೀಡುವುದು. ಅಲ್ಲಿಯ ಸ್ಥಳೀಯರಿಗೆ ಉದ್ಯೋಗ ಒದಗಿಸುವುದು ಮೊದಲಾದ ಕೆಲಸಗಳನ್ನು ಮಾಡುವ ಉದ್ದೇಶವನ್ನು ಈ ಹಿಂದಿನ ಸರಕಾರ ಹೊಂದಿತ್ತು. ಅದರಿಂದ ಪ್ರಯೋಜನಗಲೂ ಆಗಿತ್ತು. ಆದರೆ ಇಂದಿನ ಸರಕಾರ ಗ್ರಾಮೀಣ ಭಾಗದ ಶಾಖೆಗಳನ್ನು ಮುಚ್ಚುತ್ತಿದೆ ಇದರಿಂದ ನಿರುದ್ಯೋಗಗಳು ಹೆಚ್ಚಾಗುತ್ತಿದೆ.

ಅಲ್ಲದೆ ಬ್ಯಾಂಕ್‍ಗಳ ಖಾಸಗೀಕರಣದಿಂದ ಮುಂದೊಂದು ದಿನ ನಮ್ಮದೇ ಹಣವನ್ನು ನಾವು ಪಡೆಯಲು ತೊಂದರೆಗಳು ಎದುರಾಗಬಹುದು. ಆದ್ದರಿಂದ ಬ್ಯಾಂಕ್‍ಗಳ ಖಸಗೀಕರಣವನ್ನು ವಿರೋಧಿಸಿ ಹೋರಾಡಬೇಕು. ನಮ್ಮ ಈ ಹೋರಾಟ ಇಂದು ನಮಗೆ ಫಲ ನೀಡದೇ ಇರಬಹದು ಆದರೆ ಮುಂದೊಂದು ದಿನ ಇದು ಖಂಡೀತಾ ಫಲ ನೀಡುತ್ತದೆ ಎಂದರು.

 ಈ ಸಂದರ್ಭದಲ್ಲಿ,  ಕೆನರಾ ಬ್ಯಾಂಕಿನ ವರದರಾಜ್, ಪ್ರವೀಣ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮನೋಜ್ ಕುಮಾರ್ ಕಲ್ಮಾಡಿ, ಹಾಗೂ ರಮೇಶ್, ಬ್ಯಾಂಕ್ ಆಫ್ ಬರೋಡದ ರಮೇಶ್, ಯೂಕೋ ಬ್ಯಾಂಕಿನ ಸೂರಜ್, ಕರ್ಣಾಟಕ ಬ್ಯಾಂಕಿನ ನಿತ್ಯಾನಂದ, ಯುಎಫ್‍ಬಿಯು ನ ಸಂಚಾಲಕರಾದ ಹೆರಾಲ್ ಡಿಸೋಜಾ, ಸಂಘಟನೆಯ ಇತರ ಮುಖಂಡರುಗಳಾದ ಜಯನ್ ಮಲ್ಪೆ, ಸುರೇಖಾ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!