ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಕ್ಕುಂದೂರು ನಾಗೇಶ್ ಕಿಣಿ ನಿಧನ

ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ಕುಕ್ಕುಂದೂರು ನಾಗೇಶ್ ಕಿಣಿಯವರು ಇಂದು ದೈವಾದೀನರಾಗಿದ್ದಾರೆ. ಕಡಿಯಾಳಿ ಹೋಟೆಲ್ ಶ್ರೀನಿವಾಸ್‍ನ ಮಾಲಕರಾಗಿದ್ದ ಅವರು, ಕಡಿಯಾಳಿ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಸದಸ್ಯರು ಆಗಿದ್ದರು.

ಅಲ್ಲದೆ ಸಮಾಜಸೇವಕರಾಗಿಯೂ ಗುರುತಿಸಿ ಕೊಂಡಿದ್ದರು. ಅವರ ಅಂತಿಮ ದರ್ಶನಕ್ಕೆ ಕಡಿಯಾಳಿಯ ಅವರ ಸ್ವಗೃಹದಲ್ಲಿ ಮಧ್ಯಾಹ್ನ 3 ರಿಂದ 4.30 ಗಂಟೆವರೆಗೆ ವ್ಯವಸ್ಥೆ ಮಾಡಲಾಗಿದೆ.

ಅವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಸಹಿತ 6 ಪುತ್ರಿಯರು ಹಾಗೂ 5 ಪುತ್ರರನ್ನು ಹಾಗೂ ಅಪಾರ ಕುಟುಂಬವರ್ಗದವರನ್ನು ಆಗಲಿದ್ದಾರೆ. ಇವರ ಅಗಲಿಕೆಗೆ ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದೆ. 

Leave a Reply

Your email address will not be published. Required fields are marked *

error: Content is protected !!