“ಚೂಸ್ ಟು ಚಾಲೆಂಜ್”: ಮಹಿಳಾ ದಿನಾಚರಣೆಯ ವಿಶೇಷ ಲೇಖನ

ಉಡುಪಿ: ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಇಂದು ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಅವರ ಸಾಧನೆಯನ್ನು ಸ್ಮರಿಸುತ್ತೇವೆ. ಪ್ರತೀ ವರ್ಷವೂ ಹೊಸ ವಿಷಯವನ್ನಿಟ್ಟುಕೊಂಡು ಮಹಿಳಾ ದಿನವನ್ನು ಆಚರಣೆ ಮಾಡಲಾಗುವ ಮಹಿಳಾ ದಿನಾಚರಣೆ ಈ ವರ್ಷದ ವಿಷಯ ” ಚೂಸ್ ಟು ಚಾಲೆಂಜ್ ” ಅಂದರೆ “ಸವಾಲು ಆಯ್ಕೆ” ಇದು ಸವಾಲಿನ ಜಗತ್ತು ಎಚ್ಚರಿಕೆಯ ಜಗತ್ತು, ಮತ್ತು ಸವಾಲಿನಿಂದ ಬದಲಾವಣೆ ಬರುತ್ತದೆ ಎಂಬುದನ್ನು ಸೂಚಿಸುತ್ತದೆ.

ಇನ್ನು ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹೇಗೆ ಮತ್ತು ಯಾಕಾಗಿ ಅಸ್ತಿತ್ವಕ್ಕೆ ಬಂತು ಎಂಬುದನ್ನು ನೋಡುತ್ತಾ ಹೋದರೆ, 1977 ರಲ್ಲಿ ವಿಶ್ವಸಂಸ್ಥೆಯಿಂದ ಅಳವಡಿಸಿಕೊಳ್ಳಲಾದ ಈ ದಿನಾಚರಣೆಯ ಇತಿಹಾಸ ಪುಟಗಳು ನಮ್ಮನ್ನು 20ನೇ ಶತಮಾನದಲ್ಲಿ ಉತ್ತರ ಅಮೆರಿಕ ಹಾಗೂ ಯುರೋಪ್ ಗಳಲ್ಲಿ ಪ್ರಾರಂಭವಾದ ಕಾರ್ಮಿಕ ಚಳುವಳಿಗೆ ಕರೆದೊಯ್ಯುತ್ತವೆ. ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅಧಿಕೃತವಾಗಿ ಅಳವಡಿಸಿಕೊಳ್ಳುವುದಕ್ಕೂ ಮುನ್ನ ಮಹಿಳಾ ದಿನಾಚರಣೆಯನ್ನು ಸಮಾಜವಾದಿ ಹಾಗೂ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತಿತ್ತು. ಆಗೆಲ್ಲಾ ಇದನ್ನು  ಅಂತಾರಾಷ್ಟ್ರೀಯ ಕಾರ್ಯನಿರತ ಮಹಿಳಾ ದಿನಾಚರಣೆ ಎಂದು ಗುರುತಿಸುತ್ತಿತ್ತು.

1909 ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಸಮಾಜವಾದಿ-ರಾಜಕೀಯ ಕಾರ್ಯಕ್ರಮ ಮಹಿಳಾ ದಿನಾಚರಣೆ ಇತಿಹಾಸದಲ್ಲಿ ಮಹತ್ವದ ಮಜಲು ಪಡೆದುಕೊಂಡಿತು. ಆ ದಿನಗಳಿಂದಲೂ  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜಾಗತಿಕವಾಗಿ ಹೊಸ ಆಯಾಮ ಪಡೆದುಕೊಂಡು ಅಭಿವೃದ್ಧಿಶೀಲ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆಚರಣೆ ಮಾಡಲಾಗುತ್ತಿದೆ.

1975ರ “ಅಂತರಾಷ್ಟ್ರೀಯ ಮಹಿಳೆಯರ ದಿನ ದ ಸಮಯದಲ್ಲಿ, ಮಾರ್ಚ್ 08 ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು. ಎರಡು ವರ್ಷದ ನಂತರ, 1977ರಲ್ಲಿ, “ದಿ ಜನರಲ್ ಅಸ್ಸೆಂಬ್ಲಿ” ಮಹಿಳೆರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗೂ ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನ ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು.  

1945ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತಾರಾಷ್ಟ್ರೀಯ “ಲಿಂಗ ಸಮಾನತಾ ತತ್ವ” ಅಂಗೀಕಾರಕ್ಕೆ ಬಂತು. ಅಲ್ಲಿಯ ನಂತರ ವಿಶ್ವವ್ಯಾಪಿ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವೃದ್ಧಿ ಕಾರ್ಯಕ್ರಮ ಹಾಗೂ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲ ವರ್ಷಗಳ ನಂತರ ಸಂಯುಕ್ತ ರಾಷ್ಟ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸಿಗಳು ಮಾನವ ಹಕ್ಕುಗಳನ್ನು ಅಭಿನಂದಿಸಿ ಮಹಿಳೆಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದವು. ಮಹಿಳೆಯರನ್ನು ಪ್ರಬಲಗೊಳಿಸುವ ಸಂಯುಕ್ತ ರಾಷ್ಟ್ರಗಳ ಕಾರ್ಯ ವಿಶ್ವದಾದ್ಯಂತ ಮುಂದುವರೆಯಿತು.

ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆಯನ್ನು ಸಾಧಿಸಲು ಮಹಿಳೆಯರ ಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜಿಸಲು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಸುತ್ತಿವೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕೂ ಸಹ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ.

ಇದು ಅಂತರಾಷ್ಟ್ರೀ ಮಹಿಳಾ ದಿನಾಚರಣೆ ನಡೆದು ಬಂದ ಹಾದಿ ಇನ್ನು ಜಗತ್ತಿನಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರುವಂತೆ ನಮ್ಮ ದೇಶದಲ್ಲೂ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಮಾ.8 ರಂದು ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಅದೊಂದು ಕಾಲವಿತ್ತು. ಆಗ ಮಹಿಳೆಯರು ನಸುಕಿನ ಜಾವದಲ್ಲಿ ಎದ್ದು, ಮನೆ ಗುಡಿಸಿ, ಸಾರಿಸಿ, ಪೂಜೆ ಮಡುವುದು, ಮನೆ ಮಂದಿಗೆಲ್ಲಾ ಅಡಿಗೆ ತಯಾರಿಸುವುದು ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿಸಿಕೊಳ್ಳುವುದೇ ಜೀವನ ಎಂಬಂತಿದ್ದ ಕಾಲ. ಅಲ್ಲದೆ.  ಸ್ತ್ರೀ ಪುರುಷನಿಗೆ ಎದುರು ಮಾತನಾಡುವಂತಿಲ್ಲ, ಜೋರಾಗಿ ನಗುವಂತಿಲ್ಲ, ಪ್ರಶ್ನೆ ಮಾಡುವಂತಿಲ್ಲ ಎಂಬ ಕಟ್ಟುಪಾಡಿನ ಚೌಕಟ್ಟಿನಲ್ಲಿ ಮಹಿಳೆ ಜಿವಿಸುತ್ತಿದ್ದಳು. ಆದರೆ ಆ ಕಾಲದಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಅಮೋಘ ಸಾಧನೆ ಮಾಡಿದ್ದರು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮರಂತಹ ಅನೇಕ ಮಹಿಳೆಯರು.  

ಕತ್ತಲು ಸರಿದು ಬೆಳಕು ಜಗತ್ತಿಗೆ ಆವರಿಸುವಂತೆ ಮಹಿಳೆಯರ ಸ್ಥಾನಮಾನದಲ್ಲಿ ಬದಲಾವಣೆಯ ಬೆಳಕಿನ ಕಿರಣ ಬೆಳಗ ತೊಡಗಿತು. ನಿಧಾನವಾಗಿ ಮಹಿಳೆಯರ ಬಗೆಗೆ ಸಮಾಜದಲ್ಲಿ ಇದ್ದಂತಹ  ಆಲೋಚನೆಗಳು, ಅಭಿಪ್ರಾಯಗಳು ಬದಲಾಗಿದೆ. ಆಕೆಗಿದ್ದಂತಹ ನಿರ್ಬಂಧಗಳ ಬೇಲಿ ಸಡಿಲಗೊಂಡಿತು. ಇಂದು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದು ಸಾಧನೆಯ ಶಿಖರವನ್ನೇರುತ್ತಿದ್ದಾರೆ. ಶೀಕ್ಷಣ, ಕ್ರೀಡೆ, ಸಿನೆಮಾ, ಸಾಮಾಜಿಕ ಕಾರ್ಯ, ರಾಜಕೀಯ, ಅಂತರಿಕ್ಷ ,ಸಾಂಸ್ಕøತಿಕ, ಸಾಹಿತ್ಯ, ಸಂಗೀತ, ವಿಜ್ಞಾನ ತಂತ್ರಜ್ಞಾನ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾರೆ.

ಇಂದು ಸಾಧಕ ಮಹಿಳೆಯರ ಹೆಸರಿನ ಪಟ್ಟಿ ಬೆಳೆಯುತ್ತಾ ಇದೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತಾನೂ ತೊಡಗಿಸಿ ಕೊಳ್ಳುತ್ತಿದ್ದಾರೆ. ಪುರುಷರಿಗೆ ಪ್ರಧಾನ್ಯತೆ ನೀಡುತ್ತಿದ್ದ ಸಮಾಜದಲ್ಲಿ ತಾನೂ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮಹಿಳೆಯರು. ಸಮಾಜದಲ್ಲಿ ಇಂದು ಪೆಟ್ರೋಲ್ ಬಂಕ್, ಫ್ರ್ಯಾಕ್ಟ್ರಿಗಳಲ್ಲಿ ದುಡಿಯುವುದರಿಂದ ಹಿಡಿದು ಬಾಹ್ಯಾಕಾಶ, ದೇಶಹ ಪ್ರಥಮ ಪ್ರಜೆ ಎಂಬ ರಾಷ್ಟ್ರಪತಿ ಹೆದ್ದೆಯನ್ನು ಅಲಂಕರಿಸುವ ವರೆಗೆ ಮಹಿಳೆಯರು ಬೆಳೆದಿದ್ದಾರೆ.. ಬೆಳೆಯುತ್ತಿದ್ದಾರೆ. ಸಮಾದಲ್ಲಿ ಒಂದು ನಿರ್ಧಿಷ್ಟ ಕ್ಷೇತ್ರದಲ್ಲಿ ದುಡಿಯುವ ಜೊತೆಗೆ ಮನೆಯಲ್ಲಿ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಇಬ್ಬಗೆಯ ಕರ್ತವ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಸಾಗುತ್ತಿದ್ದಾರೆ ಇಂದಿನ ಮಹಿಳೆಯರು.

 ಅಂತರಿಕ್ಷ ಕ್ಷೇತ್ರದಲ್ಲಿ ಮಿಂಚಿ ತಾರೆಯಾದ ಕಲ್ಪನಾ ಚಾಲ್ವ, ಸುನಿತಾ ಮಿಲಿಯಂ, ರಾಷ್ಟ್ರಪತಿ ಪ್ರತಿಭಾ ಪಾಟೆಲ್, ಸಮಾಜ ಸೇವಕಿ ಕಮಲಾ ದೇವಿ ಚಟ್ಟೋಪದ್ಯಾಯ, ಕ್ರೀಡಾ ಕ್ಷೇತ್ರದ ಬಾಕ್ಸರ್ ಮೇರಿ ಕೂಮ್, ಬ್ಯಾಡ್ಮಿಂಟನ್‍ ಸೈನಾ ಸೆಹವಾಲ್, ಪಿವಿ ಸಿಂದೂ, ಟೆನಿಸ್ ತಾರೆ ಸಾನಿಯ ಮಿರ್ಜಾ, ಕ್ರಿಕೆಟ್‍ನ ಮಿಥಾಲಿ ರಾಜ್ ಹೀಗೆ ಇನ್ನು ಅನೇಕ ಮಹಿಳೆಯರು ತಮ್ಮ ಸಾಧನೆ ಮೂಲಕ ಕೀರ್ತಿ ಪಾತಕೆಯನ್ನು ಹಾರಿಸಿದ್ದಾರೆ. ಇವರು ಭವಿಷ್ಯದ ಪೀಳಿಗೆಗೆ ಸ್ಪೂತಿಯ ಹಾಗೂ ಮಾದರಿಯಾಗಿದ್ದಾರೆ.

 ಇಂದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಜಗತ್ತಿನಾದ್ಯಂತ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ದೇಶದ ಸಾಧಕ ಮಹಿಳೆಯರನ್ನು ನೆನೆದು ಗೌರವ ಸೂಚಿಸುತ್ತದೆ. ಅಂತೆಯೆ ನಾವೂ ಕೂಡಾ, ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಸಾಧಕ ಮಹಿಳೆಯರು, ದಿನ ನಿತ್ಯ ತಮ್ಮ ತಮ್ಮ ಮನೆ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತು. ಮನೆಯ ಸದಸ್ಯರ ನಿತ್ಯದ ಅಗತ್ಯತೆಗಳನ್ನು ಪೂರೈಸುವ ತಾಯಿಯಂದಿರು, ಸಹೋದರಿಯರು, ಸರಿಯಾದ ಮಾರ್ಗದರ್ಶನ ನಿಡುವ ಮೂಲಕ ಸಹಕರಿಸುವ ಗೆಳತಿಯರಿಗೆ, ಶಿಕ್ಷಕಿಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.

ಲೇಖನ – ದಿವ್ಯ ಮಂಚಿ

Leave a Reply

Your email address will not be published. Required fields are marked *

error: Content is protected !!