ಕೊಕೇನ್ ಸಾಗಿಸುತ್ತಿದ್ದ ಬಿಜೆಪಿ ಯುವ ಮೋರ್ಚಾ ನಾಯಕರಿಬ್ಬರ ಬಂಧನ

ಕೋಲ್ಕತ್ತ: ಕೊಕೇನ್ ಸಾಗಿಸುತ್ತಿದ್ದ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಯುವ ಮೋರ್ಚಾದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಪಶ್ಚಿಮಬಂಗಾಳದ ಕೋಲ್ಕತದಲ್ಲಿ ನಡೆದಿದೆ.

ಬಿಜೆಪಿಯ ಯುವ ಮೋರ್ಚಾದ ನಾಯಕರಾದ ಪಮೇಲಾ ಗೋಸ್ವಾಮಿ ಹಾಗೂ ಪ್ರಬಿರ್ ಡೆ ಬಂಧಿತರು. ಫೆ.19 ರ ಸಂಜೆ ಪೊಲೀಸರು ಪಮೆಲಾ ಅವರ ಕಾರು ಪರಿಶೀಲನೆ ನಡೆಸಿದಾದ ಪಮೆಲಾ ಅವರ ಪರ್ಸ್‍ನಲ್ಲಿ ಹಾಗೂ ಕಾರಿನ ಸೀಟಿನ ಅಡಿಯಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ 100 ಗ್ರಾಂ ತೂಕದ ಕೊಕೇನ್ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಪಮೇಲಾ ಗೋಸ್ವಾಮಿ ಹಾಗೂ ಘಟನೆ ವೇಳೆ ಕಾರಿನಲ್ಲಿದ್ದ ಪ್ರಬಿರ್ ಡೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ 

Leave a Reply

Your email address will not be published. Required fields are marked *

error: Content is protected !!