ಟೂಲ್ ಕಿಟ್ ಕೇಸ್: ದಿಶಾ ರವಿಗೆ ಮೂರು ದಿನಗಳ ನ್ಯಾಯಾಂಗ ಬಂಧನ

ನವದೆಹಲಿ: ಟೂಲ್ ಕಿಟ್ ದಾಖಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ದೆಹಲಿ ನ್ಯಾಯಾಲಯವೊಂದು ಶುಕ್ರವಾರ ಒಪ್ಪಿಸಿದೆ. 

ಈ ಪ್ರಕರಣದಲ್ಲಿ  ದಿಶಾ ರವಿ ಅವರ ಅಗತ್ಯವಿರುವುದರಿಂದ ತಮ್ಮ ವಶಕ್ಕೆ ನೀಡುವಂತೆ ದೆಹಲಿ ಪೊಲೀಸರು ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡರು.

ದೇಶದ್ರೋಹ, ಪಿತೂರಿ ಆರೋಪ ಎದುರಿಸುತ್ತಿರುವ ದಿಶಾ ರವಿ ಅವರನ್ನು ಬೆಂಗಳೂರಿನ ಅವರ ಮನೆಯಿಂದ ಕಳೆದ ವಾರ  ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.

ನ್ಯಾಯಾಲಯ 5 ದಿನಗಳ ಕಾಲ ಪೋಲೀಸರ ವಿಚಾರಣೆಗೆ ನೀಡಿತ್ತು. ಆ ಅವಧಿ‌ ಮುಗಿದ ಹಿನ್ನೆಲೆಯಲ್ಲಿ 3 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದಕ್ಕೂ ಮುನ್ನ ತಮ್ಮ ವಿರುದ್ಧದ ಎಫ್‌ಐಆರ್ ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಮಾಧ್ಯಮಗಳಿಗೆ ಪೊಲೀಸರು ಮಾಹಿತಿ ಸೋರಿಕೆ ಮಾಡಿದ್ದಾರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಮಾಧ್ಯಮಗಳಿಗೆ ನೀಡದಂತೆ ಪೊಲೀಸರಿಗೆ ನಿರ್ದೇಶಿಸುವಂತೆ ದಿಶಾ ರವಿ ಮನವಿ ಮಾಡಿಕೊಂಡಿದ್ದಳು.

ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ನೇತೃತ್ವದ ಪೀಠ, ಹಗರಣದ ಕುರಿತು ತನಿಖಾ ವರದಿಯನ್ನು ಮಾಧ್ಯಮಗಳಿಗೆ ನೀಡದಂತೆ ಪೊಲೀಸರಿಗೆ ಆದೇಶಿಸಿದೆ. ಅಲ್ಲದೆ, ಈ ಕುರಿತ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆಗಳನ್ನೂ ನೀಡದಂತೆಯೂ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಒಂದು ವೇಳೆ ಎಲ್ಲಾ ಸಾಕ್ಷ್ಯಾಧಾರಗಳು ಸಿಕ್ಕರೂ, ಸಿಕ್ಕಿರುವ ಸಾಕ್ಷ್ಯಾಧಾರಗಳು ಈ ಹಗರಣ ಕುರಿತು ಇದ್ದರೂ ಅಂಥ ಸಂದರ್ಭದಲ್ಲಿಯೂ ಯಾವುದೇ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!