ಅಂಬೇಡ್ಕರ್ ಕಂಡ ಮೀಸಲಾತಿಯ ಪಾವಿತ್ರ್ಯತೆಯ ಕಾಲ ಮುಗಿದೆ ಹೇೂಗಿದೆ: ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ
“ಒಂದು ರಾಷ್ಟ್ರ ಒಂದು ಮೀಸಲಾತಿ” : ಮೂಲ ಸಂವಿಧಾನದಲ್ಲಿ ಅಂಬೇಡ್ಕರ್ ಕಂಡ ಮೀಸಲಾತಿಯ ಪಾವಿತ್ರ್ಯತೆಯ ಕಾಲ ಮುಗಿದೆ ಹೇೂಗಿದೆ. ನಾವಿನ್ನು ಕಾಣಬೇಕಾಗಿರಿರುವುದು ಕಾಲಕ್ಕೆ ಹೊಂದುವ ಹೊಸ ಮೀಸಲಾತಿ ಚಿಂತನೆ. ಹೊಸ ಮೀಸಲಾತಿ ನೀತಿ ಹೇಗಿರಬೇಕು ಅಂದರೆ ನಿಜವಾದ ಜಾತ್ಯತೀತ ತತ್ವದ ಹಿನ್ನಲೆಯಲ್ಲಿ ಮೂಡಿಬರಬೇಕು. ಜಾತಿ ಮತೀಯ ಆಧರಿತ ಮೀಸಲಾತಿ ಸಂಪೂರ್ಣವಾಗಿ ತೆಗೆದು ಆಥಿ೯ಕ ಹಿನ್ನೆಲೆಯಲ್ಲಿಯೇ ಮೀಸಲಾತಿ ನೀಡುವಂತಾಗಬೇಕು .
ಇಲ್ಲಿ ಕೂಡಾ ತುಂಬಾ ಜಾಗೃತೆವಹಿಸುವುದು ಅಷ್ಟೇ ಅಗತ್ಯ ಕೂಡಾ. ಇಲ್ಲವಾದರೆ ಲೆಕ್ಕಕ್ಕೆ ಸಿಗದ ಅದೇಷ್ಟೊ ಮಂದಿ ಸರಕಾರಕ್ಕೆ ಲೆಕ್ಕ ಕೊಡದ ಶ್ರೀಮಂತರು ಒಳ ನುಸುಳುವ ಅಪಾಯವೂ ಉಂಟು.ಒಂದು ಕುಟುಂಬಕ್ಕೆ ಒಮ್ಮೆಮೀಸಲಾತಿ ಪ್ರಯೇೂಜನ ದೊರೆತ ಅನಂತರ ಅದೇ ಕುಟುಂಬಕ್ಕೆ ಮತ್ತೆ ಮೀಸಲಾತಿ ನೀಡ ಬಾರದು.ಈ ಮೀಸಲಾತಿ ಜಾತಿ ಪ್ರಾದೇಶಿಕತೆ ಮೀರಿದ “ಒಂದು ರಾಷ್ಟ್ರ ಒಂದು ಮೀಸಲಾತಿ “ತರುವುದರಿಂದ ಈ ದೇಶದಲ್ಲಿ ಜಾತ್ಯತೀತೆ ಮತ್ತು ರಾಷ್ಟ್ರೀಯತೆಯನ್ನು ಇನ್ನಷ್ಟು ಗಟ್ಟಿ ಗೊಳಿಸುವುದರ ಜೊತೆಗೆ ಆಥಿ೯ಕ ಸಾಮಾಜಿಕ ನ್ಯಾಯ ಸವ೯ ವ್ಯಾಪಿಯಾಗಿ ಸ್ಪಶಿ೯ಸಲು ಸಾಧ್ಯ .
ಇಂದಿನ ಮೀಸಲಾತಿ ಹೇಗಿದೆ ಅಂದರೆ ಮೀಸಲಾತಿ ಪ್ರಯೇೂಜನ ನಿಜವಾಗಿ ಯಾರಿಗೆ ಸಿಗ ಬೇಕೊ ಅವರಿಗೆ ದಕ್ಕದೆ ಕೇವಲ ಜಾತಿಯ ಹೆಸರಿನಲ್ಲಿ ಯಾರು ಬಲಿತರೇೂ.ಹಿಂದುಳಿದ ಹೆಸರಿನಲ್ಲಿ. ಮುಂದುಳಿದ ವಗ೯ದ ಜನರಿಗೆ ದಕ್ಕತ್ತಿದೆ ಅನ್ನುವುದು ಎಲ್ಲ ರಿಗೂ ತಿಳಿದಿರುವ ಸತ್ಯಾಂಶ ಕೂಡಾ.ಆದರೆ ಇದರ ವಿರುದ್ದ ಧ್ವನಿ ಎತ್ತ ಬೇಕಾದ ಸವ೯ ಜಾತಿಯವರು ಆಥಿ೯ಕ ಸಾಮಾಜಿಕ ಶೆೈಕ್ಷಣಿಕವಾಗಿ ದುಬ೯ಲ ವಾಗಿರುವ ಮೀಸಲಾತಿ ವಂಚಿತ ವಗ೯ಕ್ಕೆ ಧ್ವನಿ ಎತ್ತದ ಪರಿಸ್ಥಿತಿ.
ಬಡವರ ಹೆಸರಿನಲ್ಲಿ ಮೀಸಲಾತಿ ಅನುಭವಿಸುವ ಮೇಲ್ವಗ೯ದ ಧ್ವನಿ ರಾಜಕೀಯ ಶಕ್ತಿ ಮೇಳೆೈಸುತ್ತಿದೆ.ಹಾಗಾಗಿ ಈ ವಗ೯ ತಮ್ಮ ಜಾತಿಯ ಮೀಸಲಾತಿಗೆ ದಕ್ಕೆ ಬಂದಾಗ ಜಾತಿ ಮತೀಯ ಬಣ್ಣ ಬಳಿದು ಧ್ವನಿ ಅಡಗಿಸುವ ಕೆಲಸ ಮಾಡುತ್ತಿವೆ.ಒಂದು ವೇಳೆ ನಮ್ಮ ಅಂಬೇಡ್ಕರ್ ಜೀವಂತವಾಗಿ ಇದಿದ್ದರೆ ಇಂದಿನ ಮೀಸಲಾತಿಯ ಅವ್ಯವಸ್ಥೆಯನ್ನು ಖಡಾ ಖಂಡಿತವಾಗಿಯೂ ವಿರೇೂಧಿಸುತ್ತಿದ್ದರು ಅನ್ನುವುದು ಅಷ್ಟೇ ಸತ್ಯ .
ಇಂದಿನ ನಮ್ಮ ರಾಜಕೀಯ ಪಕ್ಷ ಗಳಿಗೂ ರಾಜಕಾರಣಿ ಗಳಿಗೂ ಇಚ್ಛಾ ಶಕ್ತಿಯ ಕೊರತೆ ಜೊತೆಗೆ ಅಧಿಕಾರ ಕಳಚಿ ಹೇೂಗುತ್ತದೊ ಅನ್ನುವ ಭಯ ಕಾಡುತ್ತಿರುವ ಕಾರಣ ಮೀಸಲಾತಿ ಕುರಿತು ಮಾತನಾಡುವ ನಾಲಿಗೆ ಕಳೆದು ಕೊಂಡಿದ್ದಾರೆ ಅನ್ನುವುದು ತಮಗೆ ತಿಳಿದ ನಿಜಾಂಶವೂ ಹೌದು.”ಬೆಕ್ಕಿಗೆ ಘಂಟೆ ಕಟ್ಟುವವರು ಯಾರು ಕಾದು ನೇೂಡೇೂಣ. ನಿಮ್ಮ ಅಭಿಪ್ರಾಯವೂ ಹರಿದು ಬರಲಿ.
ಉತ್ತಮವಾದ ಸಂದೇಶವನ್ನು ನೀಡಿದ್ದೀರಿ ಜಿ. ಉಳಿದೆಲ್ಲ ವಿಷಯಕ್ಕೆ ಜ್ಯಾತ್ಯಾತೀತ ಅನ್ನುವವರು ಈ ವಿಷಯಕ್ಕೆ ಮೌನ. ಆರ್ಥಿಕವಾಗಿ ಮೀಸಲಾತಿ ನೀಡುವುದರ ಮೂಲಕ ಎಲ್ಲರಿಗೂ ನ್ಯಾಯ ಸಿಗವುದು.