ಶಿರ್ವ: ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ

ಶಿರ್ವ: ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಬಂಧಿಸಿರುವ ಘಟನೆ ಶಿರ್ವದ ಸೈಂಟ್ ಮೇರೀಸ್  ವೃತ್ತದ ಬಳಿ ನಡೆದಿದೆ.

ಒರಿಸ್ಸಾ ಮೂಲದ ಬಡಾನಿಡಿಯೂರಿನ ಸಾಗರ್(22) ಬಂಧಿತ ಆರೋಪಿ. ಈತನನ್ನು ವಶಕ್ಕೆ ಪಡೆದ ಪೊಲೀಸರು ಈತನಿಂದ 32,000 ರೂಪಾಯಿ ಮೌಲ್ಯದ 1 ಕೆ.ಜಿ. 100 ಗ್ರಾಂ ಗಾಂಜಾ  ( ತಲಾ 50 ಗ್ರಾಂ ನಂತೆ 22 ಪ್ಲಾಸ್ಟಿಕ್ ತೊಟ್ಟೆಗಳು),  7 ಖಾಲಿ ಪ್ಲಾಸ್ಟಿಕ್‌ ತೊಟ್ಟೆಗಳು, 1,200 ರೂಪಾಯಿ ನಗದು, ಗಾಂಜಾ ತುಂಬಿಸಿದ ಬ್ಯಾಗ್‌, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ ಫೋನ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು  ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!