ಬಂಟಕಲ್: ಜ.1ರಂದು ‘ಝೀ ಝೂ’ ಕೋಚಿಂಗ್ ಸೆಂಟರ್ ಉದ್ಘಾಟನೆ

ಬಂಟಕಲ್: ಯಾವುದೇ ಪರಿಸರದಲ್ಲಿ ಸ್ಥಳೀಯವಾಗಿ ಉತ್ತಮ ಸೌಲಭ್ಯ ಗಳೊಂದಿಗೆ ಉತ್ತಮ ಶಿಕ್ಷಣ ದೊರೆತರೆ ಶಿಕ್ಷಣದ ಬೇಡಿಕೆ ಹೆಚ್ಚುತ್ತದೆ. ಆಗ ಜನರಲ್ಲಿ ತಮ್ಮ ಮುಂದಿನ ಪೀಳಿಗೆಗೆ ಶಿಕ್ಷಣದ ಅಗತ್ಯತೆ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡುತ್ತದೆ. ಈ ನಿಟ್ಟಿನಲ್ಲಿ ಕಾಪುವಿನ ಬಂಟಕಲ್ ಮೈನ್ ರೋಡ್ ನಲ್ಲಿರುವ ಮೈತ್ರಿ 3 ಕಾಂಪ್ಲೆಕ್ಸ್ ನಲ್ಲಿ, ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಆರಂಭಗೊಳ್ಳುತ್ತಿದೆ ‘ಝೀ ಝೂ’ ಎಜುಕೇಶನ್ ಶಿಕ್ಷಣ ಸಂಸ್ಥೆ. ಈ ಎಜುಕೇಶನ ಅಕಾಡೆಮಿ ಜನವರಿ ಒಂದರಿಂದ ಶುಭಾರಂಭ ಗೊಳ್ಳುತ್ತಿದೆ. ಈ ಶಿಕ್ಷಣ ಸಂಸ್ಥೆಯನ್ನು ಜ.1ರಂದು ಝೀ ಝೂ ಸಿಸ್ಟರ್ಸ್ ಉದ್ಘಾಟಿಸಲಿದ್ದಾರೆ.

ಈ ಉದ್ಘಾಟನಾ ಶುಭ ಸಮಾರಂಭದಲ್ಲಿ ಪಾಂಬೂರು ಚರ್ಚ್ನ ಫಾದರ್ ಹೆನ್ರಿ ಮಸ್ಕರೇನಸ್ ಆಶಿರ್ವಚನ ನೀಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಿನ್ಸಿಪಾಲ್ ಫಾ. ಪ್ರವೀಣ್,ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಡಾ.ವಿನ್ಸೆಂಟ್ ಆಳ್ವಾ ಭಾಗವಹಿಸಲಿದ್ದಾರೆ.

ಜನವರಿ 1 ರಿಂದ ಕೋಚಿಂಗ್ ಸೆಂಟರ್, ಡ್ಯಾನ್ಸ್ ಕ್ಲಾಸ್, ಗಿಟಾರ್ ಕ್ಲಾಸ್ ತೆರೆದುಕೊಳ್ಳಲಿದೆ. ಇದರೊಂದಿಗೆ ಮುಂದಿನ ಅಕಾಡೆಮಿಕ್ ಗಾಗಿ ಪ್ಲೇ ಸ್ಕೂಲ್ ಕೂಡಾ ತೆರೆದುಕೊಳ್ಳುತ್ತಿದೆ. ಈ ಕೋಚಿಂಗ್ ಸೆಂಟರ್ ನಲ್ಲಿ  ಕೆ.ಜಿ ಯಿಂದ 12ನೇ ತರಗತಿವರೆಗೆ ಎಲ್ಲಾ ಗ್ರೇಡ್ ನ ಕನ್ನಡ , ಇಂಗ್ಲಿಷ್ ಭಾಷೆಯಲ್ಲಿ ಕೋಚಿಂಗ್ ನೀಡಲಾಗುತ್ತದೆ. ಈ ಸಂಸ್ಥೆಯಲ್ಲಿ ಮಕ್ಕಳ ಸುರಕ್ಷತೆಗೆ ಬೇಕಾದ ಅಗತ್ಯ ಸೌಕರ್ಯ ಗಳನ್ನು ಒಳಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿಯನ್ನೂ ಅಳವಡಿಸಲಾಗಿದೆಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!