ಕುವೆಂಪು ಜನ್ಮದಿನದಂದು ಕನ್ನಡ ಜಾಗೃತಿ ಅಭಿಯಾನ

ಉಡುಪಿ (ಉಡುಪಿ ಟೈಮ್ಸ್ ವರದಿ): ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕನಾ೯ಟಕ ಸರಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಪರ ಆಶಯದಂತೆ ಕನ್ನಡ ಪರ ಘೋಷ ವಾಕ್ಯಗಳ ಪ್ರದಶ೯ನದೊಂದಿಗೆ ಉಡುಪಿ ಮಣಿಪಾಲದ ವಿವಿಧ ಬ್ಯಾಂಕುಗಳಿಗೆ ಭೇಟಿ ನೀಡಿ ‘ಕನ್ನಡದಲ್ಲೇ ನಿತ್ಯ ವ್ಯವಹರಿಸುವ ಮೂಲಕ ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸುವ ಬೆಳೆಸುವ ‘ ಎಂಬ ಹಕ್ಕೊತ್ತಾಯದ ವಿನಂತಿ ಪತ್ರವನ್ನು ಬ್ಯಾಂಕುಗಳ ಮುಖ್ಯಸ್ಥರಿಗೆ ನೀಡಲಾಯಿತು.

ಈ ಸಮಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ರಂಗನಟ ಸುಕುಮಾರ್ ಮೋಹನ್, ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ರಂಗನಟಿಯರಾದ ಶಿಲ್ಪ ಜೋಷಿ , ದೀಪಿಕಾ ಭಟ್ ಹಾಗೂ ಕನ್ನಡಾಭಿಮಾನಿಗಳಾದ ನಾಗೇಂದ್ರ ಭಟ್, ಸಂದೇಶ್ ಕೋಟ್ಯಾನ್ ಹಾಗೂ ರಂಜನ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!