ಚುನಾವಣಾ ಕರ್ತವ್ಯ ನಿರ್ವಹಿಸುವ ಪೊಲೀಸರು ಭತ್ಯೆ ಪಡೆಯಲು ಅರ್ಹರಲ್ಲವೇ ?

ಚುನಾವಣೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಒಂದು ಪ್ರಮುಖ ಘಟ್ಟವಾಗಿರುತ್ತದೆ. ಮತದಾರರು ತಮ್ಮ ಅಮೂಲ್ಯವಾದ ಮತಗಳನ್ನು ಸೂಕ್ತ ಅಭ್ಯರ್ಥಿಗೆ ನೀಡುವ ಮೂಲಕ ಗ್ರಾಮ, ನಗರ ಹೀಗೆ ಇಡೀ ರಾಜ್ಯದ ಅಭಿವೃದ್ಧಿಗೆ ಪರೋಕ್ಷವಾಗಿ ಸಹಕಾರ ನೀಡುವ ಒಂದು ಪ್ರಕ್ರಿಯೆ.

ಚುನಾವಣೆ ಯಾವುದೇ ಅಡಚಣೆ ಇಲ್ಲದೇ ಸಾಂಗವಾಗಿ ನಡೆಯಬೇಕೆಂದರೆ ಅಲ್ಲಿ ಚುನಾವಣಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ವರ್ಗದ ಸಿಬ್ಬಂದಿಗಳೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಇಲ್ಲಿ ಚುನಾವಣಾ ಸಂರ್ಬದಲ್ಲಿ ಕರ್ತವ್ಯ  ತಾರತಮ್ಯ ಧೊರಣೆ ನಡೆಯುತ್ತಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.

ಇದಕ್ಕೆ ಕಾರಣ ಚುನಾವಣಾ ಸಂದರ್ಬದಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ನೀಡುವ ಚುನಾವಣಾ ಭತ್ಯೆ. ಆದರೆ, ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸಿಬ್ಬಂದಿ ವರ್ಗವರಿಗೆ ಚುನಾವಣಾ ಭತ್ಯೆ ನೀಡಲಾಗುತ್ತದೆ. ಆದರೆ ಈ ಚುನಾವಣಾ ಭತ್ಯೆ ಕರ್ತವ್ಯಕ್ಕೆ ಹಾಜರಾಗುವ ಒಂದು ವರ್ಗಕ್ಕೆ ಮಾತ್ರ ಇಲ್ಲವಾಗಿದೆ. 

ಹೌದು ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಂದರೆ ಚುನಾವಣಾ ಕರ್ತವ್ಯದಲ್ಲಿರುವ ಸ್ವಚ್ಚತಾ ಕರ್ಮಿಗಳಿಂದ ಹಿಡಿದು ಪಿಆರ್ ಓ ತನಕ ಈ ಚುನಾವಣಾ ಭತ್ಯೆಗೆ ಅರ್ಹರಾಗಿರುತ್ತಾರೆ. ಆದರೆ ಅವರಂತೆ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿಗಳು ಮಾತ್ರ ಈ ಭತ್ಯೆಯಿಂದ ವಂಚಿತರಾಗಿದ್ದಾರೆ. 

ಈ ಹಿಂದಿನ ಲೋಕಸಭೆ, ವಿಧಾನಸಭೆ , ನಗರ ಸಭೆ, ಚುನಾವಣೆಯ ಸಂದರ್ಭದಲ್ಲೂ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಈ ಭತ್ಯೆ ಸಿಕ್ಕಿರುವುದಿಲ್ಲ. ಚುನಾವಣಾ ಕರ್ತವ್ಯ ದ ಪಟ್ಟಿಯಲ್ಲಿ ಪೊಲೀಸ್ ಸಿಬ್ಬಂದಿಗಳ ಖರ್ಚಿನ ಬಗ್ಗೆ ಉಲ್ಲೇಖಿಸಲಾಗುತ್ತದೆ. ಆದರೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರ ಯಾವುದೇ ರೀತಿಯ ಭತ್ಯೆ ಸಿಕ್ಕಿಲ್ಲ ಎಂಬುದು ಆರೋಪವಾಗಿದೆ.

ಆದರೆ ಚುನಾವಣಾ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಗಳಿಗೆ ಈ ಭತ್ಯೆ ಯಾಕೆ ಸಿಗುವುದಿಲ್ಲ. ಚುನಾವಣೆ ವೇಳೆ  ಅವರು ಇತರ ಸಿಬ್ಬಂದಿಗಳಂತೆ ಕರ್ತವ್ಯ ನಿರ್ವಹಿಸುತ್ತಾರೆ. ಅವರೂ ಇದಕ್ಕೆ ಅರ್ಹರಲ್ಲವೇ ಎಂಬ ಪ್ರಶ್ನೆಯೊಂದು ಮೂಡುತ್ತದೆ. ಒಂದು ವೇಳೆ ಚುನಾವಣಾ  ಭತ್ಯೆಗೆ ಸಂಬಂಧಿಸಿ ಯಾವುದಾದರೂ ನಿಯಮಗಳು ಇರುವುದಾದಲ್ಲಿ ಯಾವುದೋ ಸಮಯದಲ್ಲಿ ಮಾಡಿರುವ ಆದೇಶವನ್ನೇ ಹಿಡಿದುಕೊಂಡು ಈಗಲೂ ಪೊಲೀಸರನ್ನು ಅದೇ ವ್ಯವಸ್ಥೆಯಲ್ಲಿ ನೋಡಿಕೊಳ್ಳುವುದು ಸರಿಯೇ.. ?

ಯಾಕೆಂದರೆ ಚುನಾವಣಾ ಸಂದರ್ಭದಲ್ಲಿ ಯಾವುದೇ ಅಡಚಣೆ, ಗಲಾಟೆ ಗದ್ದಲ,  ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಚುನಾವಣೆ ನಡೆಯುತ್ತದೆ ಎಂದರೆ ಅದರಲ್ಲಿ ಪೊಲೀಸ್ ಸಿಬ್ಬಂದಿಗಳ ಪಾತ್ರ ತುಂಬಾನೇ ಮಹತ್ವವನ್ನು ಪಡೆದು ಕೊಳ್ಳುತ್ತದೆ. ಇಷ್ಟೇಲ್ಲಾ ಕರ್ತವ್ಯ ನಿರ್ವಹಿಸಿದರೂ ತಮಗೆ ಭತ್ಯೆ ಸಿಗದ ಬಗ್ಗೆ ಅಸಮಾಧಾನ ಇದ್ದರೂ ಕೂಡಾ, ಏನೆ ಇರಲಿ ನಾವು ಪೊಲೀಸರು ನಮ್ಮ ಕರ್ತವ್ಯವನ್ನು ಸಮರ್ಥವಾಗಿ ಮಾಡುತ್ತೇವೆ. ಎನ್ನುವುದು ಅವರ ಉತ್ತರವಾಗಿರುತ್ತದೆ.
 
ಹಾಗಾಗಿ ಇನ್ನು ಮುಂದಿನ ಚುನಾವಣಾ ಸಂದರ್ಭಗಳಲ್ಲಿ ಆದರೂ, ಇತರ ಸಿಬ್ಬಂದಿಗಳಿಗೆ ನೀಡುವ ಚುನಾವಣಾ ಭತ್ಯೆಯನ್ನು ಪೊಲೀಸ್ ಸಿಬ್ಬಂದಿಗಳಿಗೂ ನೀಡುವ ಕುರಿತು ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತಾಗಲಿ ಎಂಬುದು ಹಲವರ ನಿರೀಕ್ಷೆ .

Leave a Reply

Your email address will not be published. Required fields are marked *

error: Content is protected !!