ಕಾಪು ; ಗಾಂಜಾ ಸೇವನೆ ಯುವಕ ಪೊಲೀಸ್ ವಶಕ್ಕೆ

ಕಾಪು: ಗಾಂಜಾ ಸೇವನೆ ಮಾಡುತ್ತಿದ್ದ ಯುವಕನೊಬ್ಬನನ್ನು ಕಾಪು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕನನ್ನು  ಮಂಗಳೂರಿನ ಕೂಳೂರು  ಸಮೀಪದ ಸೈಯದ್ (23 ) ಎಂದು ಗುರುತಿಸಲಾಗಿದೆ. 

ಡಿ.21 ರಂದು ಕಾಪುವಿನ ಪಡು ಗ್ರಾಮದ ಲೈಟ್ ಹೌಸ್ ಬಳಿ ಯುವಕನೋರ್ವ ಅಮಲು ಪದಾರ್ಥ ಸೇವಿಸಿರುವ ಶಂಕೆ ಇರುವ ಕುರಿತು ಮಾಹಿತಿ ಪಡೆದ ಕಾಪು ಪೊಲೀಸರು ಕಾರ್ಯಾಚರಣೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಯುವಕನೋರ್ವ ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನ ಆರೋಗ್ಯ ತಪಾಸಣೆ ನಡೆಸಿದಾಗಿತ್ತು.  ಇದೀಗ ನಿನ್ನೆ ಆರೋಪಿಯ ವೈದ್ಯಕೀಯ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದ್ದು.  ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!